Select Your Language

Notifications

webdunia
webdunia
webdunia
webdunia

ಹೃತಿಕ್ ರೋಷನ್‌ರಿಂದ ಮೊಹೆಂಜೊ ದಾರೋ ಕೆಲಸ ಆರಂಭ

ಹೃತಿಕ್ ರೋಷನ್‌ರಿಂದ ಮೊಹೆಂಜೊ ದಾರೋ ಕೆಲಸ ಆರಂಭ
, ಗುರುವಾರ, 29 ಜನವರಿ 2015 (09:43 IST)
ಬ್ಯಾಂಗ್ ಬ್ಯಾಂಗ್ ಚಿತ್ರದಲ್ಲಿ ಸಂಪೂರ್ಣವಾಗಿ ಬ್ಯುಸಿ ಆಗಿದ್ದ ಹೃತಿಕ್ ರೋಶನ್ ಈಗ ಅವರ ನಟನೆಯ ಬಹುನಿರೀಕ್ಷಿತ ಚಿತ್ರ ಮೊಹೆಂಜೊ ದಾರೋದಲ್ಲಿ ನಟಿಸಲು ಬಂದಿದ್ದಾರೆ. ವರದಿಯ ಪ್ರಕಾರ ಈಗ ಆ ಚಿತ್ರದ ನಟನೆಗೆಂದು ಅವರು ರಾಜಸ್ಥಾನದ ಭುಜ್ ಪ್ರದೇಶಕ್ಕೆ ಆಗಮಿಸಿದ್ದಾರೆ. ಅಲ್ಲಿ ಅವರ   ನಟನೆಯ ಚಿತ್ರ ಮೊಹೆಂಜೊ ದಾರೋ ಚಿತ್ರೀಕರಣವಾಗಲಿದೆ.
ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಅಪಾರ ಸಂಖ್ಯೆ ಅಭಿಮಾನಿಗಳು ಸ್ವಾಗತಿಸಿ, ಅವರು ಫೋಟೋ ಹಿಡಿದರು. ಅಭಿಮಾನಿಗಳ ಮನಕ್ಕೆ ಇಷ್ಟ ಆಗುವಂತೆ   ಪೋಸ್ ಕೊಟ್ಟು ಅವರನ್ನು ಖುಷಿ ಪಡಿಸಿದರು ಹೃತಿಕ್. ಮೊಹೆಂಜೊ ದಾರೋ ಚಿತ್ರವನ್ನು ಅಶುತೋಷ್ ಗೊವಾರಿಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 2008  ರಲ್ಲಿ ಈ ಜೋಡಿ ಜೋಧಾ ಅಕ್ಬರ್ ಚಿತ್ರದ ಮೂಲಕ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಮತ್ತೆ ಒಂದಾಗಿದ್ದಾರೆ ಮೊಹೆಂಜೊ ದಾರೋ ಮೂಲಕ. ಈ ಚಿತ್ರದಲ್ಲಿ ಹೃತಿಕ್ ಜೋಡಿ ಆಗಲಿದ್ದಾಳೆ ಕನ್ನಡದ ಹುಡುಗಿ  ಪೂಜಾ ಹೆಗ್ಡೆ.  ಸಿಂಧು ಕಣಿವೆ ನಾಗರಿಕತೆಯ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಇದು ಮುಂದಿನ ವರ್ಷ ಬಿಡುಗಡೆ ಆಗಲಿದೆ.
 

Share this Story:

Follow Webdunia kannada