Webdunia - Bharat's app for daily news and videos

Install App

ಹಾಲಿವುಡ್‌ ಸಿನಿಮಾಗಳ ಅವಕಾಶಗಳ ಸುರಿಮಳೆಯಲ್ಲಿ ಮಿಂದೇಳುತ್ತಿರುವ ಹೃತಿಕ್

Webdunia
ಶುಕ್ರವಾರ, 24 ಏಪ್ರಿಲ್ 2015 (10:16 IST)
ಬಾಲಿವುಡ್‌ನಲ್ಲಿ ಗ್ರೀಕ್ ದೇವತೆ ಹೃತಿಕ್ ರೋಶನ್. ಅವರ ಆ ರೂಪ, ಸೌಷ್ಟವವನ್ನು ಅವರ ಅಭಿಮಾನಿಗಳು ಗ್ರೀಕ್ ದೇವತೆಗೆ ಹೋಲಿಕೆ ಮಾಡಿರುವುದರಿಂದ ಅವರು ಗ್ರೀಕ್ ದೇವತೆ ಎಂದೇ ಪ್ರಚಲಿತ. ಬಾಲಿವುಡ್‌ನಲ್ಲಿ ಅಪರೂಪದ ಯಶಸ್ಸು ಗಳಿಸಿರುವ ಈ ನಟನ ಅಭಿನಯದ ಸಿನಿಮಾಗಳು ಅದ್ಧೂರಿಯಿಂದ ಕೂಡಿದ್ದಾಗಿದೆ. ಭಾರೀ ಲೋಕೇಶನ್, ವಿದೇಶದಲ್ಲೇ ಚಿತ್ರೀಕರಣದ, ಸಿಕ್ಕಾಪಟ್ಟೆ ಅದ್ಧೂರಿಯಾದ ಸೆಟ್ಸ್ ಹೀಗೆ ಒಂದೇ ಎರಡೇ ? ಇತ್ತೀಚೆಗೆ ಅವರ ಅಭಿನಯದ ಬ್ಯಾಂಗ್ ಬ್ಯಾಂಗ್ ಬಿಡುಗಡೆಯಾಗಿತ್ತು. ಅದಾದ ಬಳಿಕ ಈಗ ಮತ್ತೆ ಅತಿ ಅದ್ಧೂರಿಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 
ಈಗ ಬಂದಿರುವ ಸುದ್ದಿ ಏನೆಂದರೆ ಈ ನಟನನ್ನು ಹಾಲಿವುಡ್ ಚಿತ್ರಗಳು ಹುಡುಕಿಕೊಂಡು ಬಂದಿವೆ. ಅನೇಕಾನೇಕ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಎದುರಾಗಿವೆ. ಈ ವರ್ಷದಲ್ಲಿ ಹಾಲಿವುಡ್ ಚಿತ್ರದಲ್ಲಿ ನಟಿಸುವುದಾಗಿ ಹೃತಿಕ್ ಹೇಳಿದ್ದಾರೆ.ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರದ ಮೊದಲ ಭಾಗದ ನಿರ್ದೇಶಕ ರಾಬ್ ಕೋಹನ್ ನಿರ್ದೇಶನದಲ್ಲಿ ಹೃತಿಕ್ ಚಿತ್ರ  ಸಿದ್ಧವಾಗುವ ಸಾಧ್ಯತೆ ಇದೆ. ಒಟ್ಟಾರೆ ಆರು ಚಿತ್ರಕಥೆಗಳು ಈಗಾಗಲೇ ಹೃತಿಕ್ ಮುಂದೆ ಇದೆಯಂತೆ. ಕೇವಲ ಬಾಲಿವುಡ್ ಗೆ ಸೀಮಿತವಾಗಿದ್ದ ಹೃತಿಕ್ ಇನ್ನು ಮುಂದೆ ವಿಶ್ವದ ಎಲ್ಲಾ ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments