Select Your Language

Notifications

webdunia
webdunia
webdunia
webdunia

ಮೇಕಪ್ ಇಲ್ಲದೆ ಇದ್ದರು ನಾನು ಸುಂದರವಾಗಿ ಕಾಣುತ್ತೇನೆ -ಶೃತಿ

ಮೇಕಪ್ ಇಲ್ಲದೆ ಇದ್ದರು ನಾನು ಸುಂದರವಾಗಿ ಕಾಣುತ್ತೇನೆ -ಶೃತಿ
, ಗುರುವಾರ, 4 ಡಿಸೆಂಬರ್ 2014 (09:07 IST)
ಪ್ರಸ್ತುತ ತಮಿಳು ಚಿತ್ರ ಪೂಜೈ ನಲ್ಲಿ ಅಭಿನಯಿಸುತ್ತಿದ್ದಾಳೆ ಶೃತಿ ಹಾಸನ್. ತನ್ನದು ಸಹಜ ಸೌಂದರ್ಯ   ಎನ್ನುವ ಮಾತನ್ನು ಆಕೆ ಮಾಧ್ಯಮಗಳ ಮುಂದೆ ಹೇಳಿದ್ದಾಳೆ. ಆರಂಭಿಕ ಹಂತದಲ್ಲಿ ಐರನ್ ಲೆಗ್ ಎನ್ನುವ ಕೆಟ್ಟ ಹೆಸರನ್ನು ಪಡೆದಿದ್ದ ಈ ಚೆಲುವೆ ಬಳಿಕ ತನ್ನ ಗಮನವನ್ನು ಗೆಲುವಿನತ್ತ ಕೇಂದ್ರೀಕರಿಸಿ ಯಶಸ್ವಿ ನಟಿಯಾದಳು.  ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತನ್ನ ಛಾಪು ತೋರಿರುವ ಈ ಚೆಲುವೆ ಈಗ ಬಹು ಬೇಡಿಕೆಯ ನಟಿಯಾಗಿದ್ದಾಳೆ. ಈಗ ಆಕೆ ಮಾರಿಷಸ್ ಎನ್ನುವ ತಮಿಳು ಚಿತ್ರದಲ್ಲಿ ಅವಕಾಶ ಪಡೆದಿದ್ದಾಳೆ. ಈ ಚಿತ್ರದಲ್ಲಿ ವಿಜಯ್ ಹೀರೋ ಆಗಿದ್ದಾರೆ. 
 ಅಷ್ಟೇ ಅಲ್ಲದೆ ಮಹೇಶ್ ಬಾಬು ಅವರ ಜೊತೆ ಒಂದು ಚಿತ್ರದಲ್ಲಿ ಮತ್ತು ಹಿಂದಿಯಲ್ಲಿ ಐದು  ಸಿನಿಮಾಗಳಲ್ಲಿ ನಟಿಸುತ್ತಿರುವ ಶೃತಿ ಬ್ಯುಸಿ ನಟಿಯಾಗಿದ್ದಾರೆ ಸಿನಿಮಾ ಇಂಡಸ್ಟ್ರಿಯಲ್ಲಿ. ಗ್ಲಾಮರ್ ಹಾಗೂ ನಟನೆ ಎರಡರ ಸಂಗಮವಾಗಿರುವ ಈ  ಚೆಲುವೆಯ ಟಾಪ್  ಹೀರೋಯಿನ್ ಸ್ಥಾನದಲ್ಲಿ ತನ್ನನ್ನು ಕುಳ್ಳರಿಸಿದ್ದಾಳೆ. ಆಕೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಬೆಳೆಯ ಬೇಕು ಎನ್ನುವ ಆಶಯ ಹೊಂದಿದ್ದಾರೆ ಅನೇಕ ಹೀರೋಯಿನ್ ಗಳು 
 
ಸಿನಿಮಾಗಳಲ್ಲಿ ಮೇಕಪ್, ಲೈಟ್ಸ್  ಮುಂತಾದ ಕಾರಣಗಳಿಂದ ತೆರೆಯ ಮೇಲೆ ಸುಂದರವಾಗಿ ಕಾಣುತ್ತಾರೆ. ಆದರೆ ನಾನು ಯಾವುದೇ ರೀತಿಯ ಮೇಕಪ್ ಬಳಸದೆ ಸುಂದರವಾಗಿದ್ದೇನೆ ಎಂದು ಹೇಳಿದ್ದಾಳೆ ಆಕೆ . ನನ್ನ ದೇಹಸಿರಿಯು ಸಹಿತ ಪ್ರಮಾಣಬದ್ಧವಾಗಿದೆ ಎಂದು ಈ ಸಮಯದಲ್ಲಿ ಆಕೆ ತಿಳಿಸಿದ್ದಾಳೆ. ಆಕಾರಣದಿಂದ ನಾನು ತುಂಬಾ ಸುಂದರವಾಗಿದ್ದೇನೆ ಎಂದು ಸ್ವ ಪ್ರಶಂಸೆ ಮಾಡಿಕೊಂಡಿದ್ದಾಳೆ ಈ ಚೆಲುವೆ. 
 

Share this Story:

Follow Webdunia kannada