Webdunia - Bharat's app for daily news and videos

Install App

ಟಾಪ್​ ನಟಿ ಎನಿಸಿಕೊಂಡ ರಶ್ಮಿಕಾ ಮಂದಣ್ಣ ಈಗ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Webdunia
ಶುಕ್ರವಾರ, 24 ಆಗಸ್ಟ್ 2018 (10:05 IST)
ಬೆಂಗಳೂರು : ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಹೆಚ್ಚಾಗಿದೆ. ಆದಕಾರಣ ಇದೀಗ ನಟಿ ತಮ್ಮ ಸಂಭಾವನೆ ಕೂಡ ಹೆಚ್ಚು ಮಾಡಿದ್ದಾರಂತೆ.


ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮೊದಲಿಗೆ ನಟಿಸಿದ ‘ಚಲೊ' ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಮೂಲಕ ಅವರು ತೆಲುಗು ಇಂಡಸ್ಟ್ರಿಯ ಟಾಪ್​ ನಟಿ ಎನಿಸಿಕೊಂಡಿದ್ದಾರೆ. ಸಾಕಷ್ಟು ಚಿತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಮೊನ್ನೆಯಷ್ಟೆ ಬಿಡುಗಡೆಯಾಗಿರುವ ಗೀತಗೋವಿಂದಂ ಚಿತ್ರ ಕೂಡ ಸಕ್ಸಸ್​ ಆಗಿರುವುದು ನಟಿ ರಶ್ಮಿಕಾ ಅವರ ಡಿಮ್ಯಾಂಡ್ ಹೆಚ್ಚುವಂತೆ ಮಾಡಿದೆ.


ಇನ್ನು ನಟಿ ರಶ್ಮಿಕಾ ಟಾಲಿವುಡ್​ನ ದೇವದಾಸ ಹಾಗೂ ಡಿಯರ್ ಕಾಮ್ರೆಡ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರಗಳು ಕೂಡ ಸೆಟ್ಟೇರಲಿವೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಸದ್ಯ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಅವರು ಒಂದು ಚಿತ್ರಕ್ಕೆ ಅರ್ಧ ಕೋಟಿ ರೂಪಾಯಿ ಕೇಳುತ್ತಿದ್ದಾರಂತೆ. ನಿರ್ಮಾಪಕರು ಕೂಡ ರಶ್ಮಿಕಾ ಕೇಳಿದಷ್ಟು ಹಣ ನೀಡಲು ರೆಡಿಯಾಗಿದ್ದಾರಂತೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
                                                  

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments