ಶಿವರಾಜ್ ಕುಮಾರ್ ಜೊತೆ ಆರಾಧ್ಯ ಬಚ್ಚನ್ ವರ್ತನೆ ನೋಡಿ ಎಲ್ಲರೂ ಶಾಕ್ (Video)

Krishnaveni K
ಗುರುವಾರ, 19 ಸೆಪ್ಟಂಬರ್ 2024 (10:28 IST)
Photo Credit: X
ದುಬೈ: ಇತ್ತೀಚೆಗೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ದೊಡ್ಮನೆ ಮೊಮ್ಮಗಳು ಆರಾಧ್ಯ ಬಚ್ಚನ್, ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದ ವಿಡಿಯೋವೊಂದು ಈಗ ಸೋಷಿಯಲ್ ಮಿಡಿಯಾದಲ್ಲಿ  ವೈರಲ್ ಆಗಿದೆ.

ದುಬೈನಲ್ಲಿ ಕಳೆದ ವಾರಂತ್ಯಕ್ಕೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆದಿತ್ತು. ನಟಿ ಐಶ್ವರ್ಯಾ ತಮ್ಮ ಮಗಳು ಆರಾಧ್ಯ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಪೊನ್ನಿಯನ್ ಸೆಲ್ವನ್ ಚಿತ್ರದ ಅಭಿನಯಕ್ಕಾಗಿ ಐಶ್ವರ್ಯಾಗೆ ಪ್ರಶಸ್ತಿ ಬಂದಿತ್ತು. ಈ ವೇಳೆ ಆರಾಧ್ಯ ನಡೆದುಕೊಂಡ ರೀತಿಗೆ ಎಲ್ಲರೂ ಹೊಗಳುತ್ತಿದ್ದಾರೆ.

ಐಶ್ವರ್ಯಾ ಪ್ರಶಸ್ತಿ ಸ್ವಿಕರಿಸಿ ಚಿಯಾನ್ ವಿಕ್ರಮ್ ಜೊತೆ ವೇದಿಕೆಯಿಂದ ಕೆಳಗಿಳಿದು ಬರುತ್ತಿರುವಾಗ ಮಗಳು ಆರಾಧ್ಯ ಓಡಿ ಬಂದು ಅಮ್ಮನನ್ನು ಅಪ್ಪಿ ಅಭಿನಂದಿಸುತ್ತಾಳೆ. ಈ ವೇಳೆ ಅಲ್ಲೇ ಇದ್ದ ಶಿವರಾಜ್ ಕುಮಾರ್ ರನ್ನು ನೋಡಿ ಐಶ್ವರ್ಯಾ ಕೈಕುಲುಕಿ ಮಾತನಾಡಿಸುತ್ತಾರೆ. ಬಳಿಕ ತಮ್ಮ ಮಗಳು ಆರಾಧ್ಯಳನ್ನು ಪರಿಚಯಿಸುತ್ತಾರೆ.

ಆರಾಧ್ಯಳನ್ನು ನೋಡಿ ಶಿವಣ್ಣ ಮೊದಲು ಕೈಕುಲುಕಿ ವಿಶ್ ಮಾಡುತ್ತಾರೆ. ಆದರೆ ಆರಾಧ್ಯ ತಕ್ಷಣವೇ ಶಿವಣ್ಣ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾಳೆ. ಆಕೆಯ ಈ ವರ್ತನೆಗೆ ನೆಟ್ಟಿಗರು ಭಾರೀ ಹೊಗಳಿದ್ದಾರೆ. ಐಶ್ ತಮ್ಮ ಮಗಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಖಾಕಿ ಉಟ್ಟು ರಿಕ್ಷಾ ಏರಿದ ರಚಿತಾ ರಾಮ್ ನಡೆಗೆ ಫ್ಯಾನ್ಸ್‌ ಫಿದಾ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಏನೇನು ತಪ್ಪು ಮಾಡಿದ್ದಾರೆ: ನಾಳೆ ದಾಸನಿಗೆ ಮಹತ್ವದ ದಿನ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಮುಂದಿನ ಸುದ್ದಿ
Show comments