Select Your Language

Notifications

webdunia
webdunia
webdunia
webdunia

ಪಾತ್ರಕ್ಕೆಂದು ಸಣ್ಣಗಾದ ಅಜಯ್ ದೇವಗನ್ ..ಅವರೆಷ್ಟು ತೂಕ ಕಡಿಮೆ ಆಗಿದ್ದಾರೆಂದರೆ !!

ಪಾತ್ರಕ್ಕೆಂದು ಸಣ್ಣಗಾದ ಅಜಯ್ ದೇವಗನ್ ..ಅವರೆಷ್ಟು  ತೂಕ ಕಡಿಮೆ ಆಗಿದ್ದಾರೆಂದರೆ !!
, ಗುರುವಾರ, 30 ಅಕ್ಟೋಬರ್ 2014 (13:20 IST)
ಸಾಮಾನ್ಯವಾಗಿ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಪೂರಕವಾಗುವಂತೆ ದೇಹವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಮಾರ್ಪಡಿಸಿ ಕೊಳ್ಳುತ್ತಾರೆ ಕಲಾವಿದರು. ಅದೇರೀತಿ ಅಜಯ್ ದೇವಗನ್ ಸಹ ಮಾಡಿದ್ದರು. ಬಾಲಿವುಡ್ ನ ಈ ಸ್ಟಾರ್ ನಟ ತಮ್ಮ ಸಿಂಗಂ ರಿಟರ್ನ್ಸ್ ಎನ್ನುವ ಚಿತ್ರಕ್ಕೆಂದು ದೇಹವನ್ನು ಸಕತ್ ದಷ್ಟಪುಷ್ಟವಾಗಿ ಬೆಳೆಸಿಕೊಂಡಿದ್ದರು. 
 
ಏಕೆಂದರೆ ಅದರಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಪೊಲೀಸಪ್ಪನ ಪಾತ್ರಧಾರಿ ಆಗಿದ್ದರು. ಆದರೆ ಈಗ ಆ ರೀತಿ ಇರುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಕಾರಣ ಅವರ ಹೊಸ ಚಿತ್ರ ಆಕ್ಷನ್ ಜಾಕ್ಸನ್ ಚಿತ್ರಕ್ಕೆಂದು ತಮ್ಮ ದೇಹಾಕೃತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅಂದರೆ ಸಣ್ಣಗಾಗಿದ್ದಾರೆ ಎನ್ನುವ ಮಾತನ್ನು ಇಲ್ಲಿ ಹೇಳೋಕೆ ಇಷ್ಟ ಪಡ್ತೀವಿ. 
 
ಈ ಚಿತ್ರವನ್ನು ಕೊರಿಯಾಗ್ರಾಫರ್  -ನಟ- ನಿರ್ದೇಶಕ ಪ್ರಭುದೇವ ಅವರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕೆಂದು ಅವರು ಸುಮಾರು ಹದಿನೇಳು ಕೆಜಿಗಳಷ್ಟು ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅದಕ್ಕೆಂದು ಜಿಮ್ ನಲ್ಲಿ ಬೆವರು ಸುರಿಸಿ ಸಣ್ಣಗಾಗಿದ್ದಾರೆ. ಇದರಲ್ಲಿ ಕತ್ತಿವರಸೆಯ ಫೈಟ್ಸ್ ಇದ್ದು, ಅದಕ್ಕೆಂದು ಅಜಯ್ ಈ ರೀತಿಯ ಬದಲಾವಣೆಯತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 
 
ಅಷ್ಟೇ ಅಲ್ಲದೆ ಕಟ್ಟುನಿಟ್ಟಿನ ಆಹಾರವನ್ನು ಸಹಿತ ಸೇವಿಸಿ ಆ ಮುಖಾಂತರವೂ ತಮ್ಮ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದಾರೆ. ಮೊಟ್ಟೆಯ  ಬಿಳಿಭಾಗ, ಬೇಯಿಸಿದ  ತರಕಾರಿ ಮತ್ತು ಕೋಳಿಮಾಂಸ ಆಹಾರದ ಮುಖ್ಯ ಭಾವನ್ನಾಗಿ ಮಾಡಿಕೊಂಡಿದ್ದಾರೆ. ಈ ರೀತಿ ತಮ್ಮನ್ನು ಸಂಪೂರ್ಣವಾಗಿ ಮಾರ್ಪಾಟು ಮಾಡಿಕೊಂಡಿರುವ ಹೀರೋ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಅವರ ಅಭಿಮಾನಿಗಳು. ಅಜಯ್ ಅವರ ಹೊಸರೂಪದ ಟ್ರೇಲರ್ ನೋಡಲು ಸಾಕಷ್ಟು ಆಸಕ್ತಿಯಿಂದ ಕಾಯುತ್ತಿದ್ದಾರೆ ಅವ್ರ ಅಭಿಮಾನಿಗಳು. 
 

Share this Story:

Follow Webdunia kannada