Webdunia - Bharat's app for daily news and videos

Install App

ಸಿನಿಮಾಗಳಲ್ಲಿ ಸೋತ ತಮನ್ನ ಒಡವೆ ವಿನ್ಯಾಸಕಾರ್ತಿ ಆಗುವತ್ತ ಚಿತ್ತ ನೆಟ್ಟರೈ ಅಕಟಕಟಾ !

Webdunia
ಗುರುವಾರ, 25 ಸೆಪ್ಟಂಬರ್ 2014 (14:28 IST)
ತಮನ್ನ ಎಷ್ಟು ಪ್ರತಿಭಾವಂತೆ, ಎಷ್ಟು ಚಂದ ಇದ್ದಾಳೆ.  ಅದ್ಯಾಕೋ ಪಾಪ ಈಕೆಯ ಅದೃಷ್ಟವೇ ಸರಿಯಾಗಿಲ್ಲ ಎಂದು ಹೇಳ ಬಹುದು. ಅದಕ್ಕೆ ಕಾರಣ ಇಷ್ಟೇ.. ತಾನು ಒಳ್ಳೆಯ ಕಾಲ ಹೊಂದಿರುವಾಗ ಬಾಲಿವುಡ್ ಕಡೆ ಹೊರಟಳು..

ಅಲ್ಲಿ ಆಕೆಯ ಅದೃಷ್ಟ ಕೈ ಕೊಡ್ತು. ಅದೇರೀತಿ ಆಕೆಯು ಟಾಲಿವುಡ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಿ ಕೊಳ್ಳುವ ಸಲುವಾಗಿ ಮತ್ತೆ ಹಳೆ ಗಂಡನ.. ಎಂದು ತೆಲುಗು ಚಿತ್ರರಂಗಕ್ಕೆ ಬಂದಳು.. ಆದರೆ ಅಲ್ಲಿಯೂ ಸಹ ಆಕೆಯ ಕನಸನ್ನು ಆಗಡು ಚಿತ್ರದ ಸೋಲು ನನಸು ಮಾಡಿಲ್ಲ! ಈ ನಡುವೆ ಆಕೆಗೆ ಟಾಲಿವುಡ್ ಮನ್ಮಥ ನಾಗಾರ್ಜುನ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು.. ಆದರೆ ಈಗ ಆ ಅವಕಾಶವು ಸಹಿತ ಜಾರಿ ಹೋಗಿದೆ . ಒಟ್ಟಾರೆ ಆಕೆಯದ್ದು ಬ್ಯಾಡ್ ಲಕ್ .
 
ಇದರಿಂದ ಬೇಸತ್ತ ಈ ಚೆಲುವಿ ಈಗ ಹೊಸ ಕೆಲ್ಸಕ್ಕೆ ಸಿದ್ಧ ಆಗಿದ್ದಾಳೆ. ತಾನೀಗ ಉತ್ತಮ ಡಿಸೈನರ್ ಆಗಲು ಸಿದ್ಧತೆ ನಡೆಸಿದ್ದಾಳೆ. ತಮನ್ನ ಗೋಲ್ಡ್ ಡಿಸೈನರ್ ಅಂತೆ. ಅಷ್ಟೇ ಅಲ್ಲದೆ ತಾನು ನಟಿಸುವ ಚಿತ್ರಗಳಲ್ಲಿ ಧರಿಸಿದ ಆಭರಣಗಳನ್ನು ತಾನೇ ವಿನ್ಯಾಸ ಮಾಡಿಕೊಂಡಿದ್ದು ಎಂದು ಹೆಮ್ಮೆಯಿಂದ ಹೇಳಿ ಕೊಂಡಿದ್ದಾಳೆ. 
 
ಪ್ರತಿನಿತ್ಯ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ತಾನು ಧರಿಸುವ ಆಭರಣವನ್ನು ತಾನೇ ಡಿಸೈನ್ ಮಾಡಿದ್ದು ಎಂದು ಹೇಳಿ ಎಲ್ಲರ ಗಮನ ಆಕೆಯತ್ತ ಬರುವಂತೆ ಮಾಡಿದ್ದಾಳೆ.ಇದಕ್ಕೆ ಕಾರಣ ತನ್ನ ತಂದೆಯ ಒಡವೆ ವ್ಯಾಪಾರ. ತಾನು ಸಹಿತ ತಂದೆಯ ಜೊತೆ ಒಡವೆ ಅಂಗಡಿಗೆ ಹೋಗುತ್ತಾ ಇರುವುದರಿಂದ ತನಗೂ ಸಹಿತ ಆಭರಣಗಳ ವಿನ್ಯಾಸಗಳ ಬಗ್ಗೆ ಅರಿವಿದೆ ಎಂದು ಹೇಳಿದ್ದಾಳೆ ತಮ್ಮು. ತಾನು ನಟಿಸ ಬೇಕಿದ್ದ ಕಾಲಿವುಡ್ ಸಿನಿಮಾ ಬೇರೆಯವರ ಪಾಲಾಗಿದ್ದರಿಂದ ಆಕೆ ಈಗ ಒಡವೆ ವಿನ್ಯಾಸ ಮಾಡುವ ಕಡೆ ಗಮನ ಕೊಟ್ಟಿದ್ದಾಳೆ..
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments