Select Your Language

Notifications

webdunia
webdunia
webdunia
webdunia

ಶ್ರದ್ಧಾ ಕಪೂರ್ ಈಗ ತನ್ನ ಮೊಟ್ಟ ಮೊದಲ ಕಾರು ಕೊಂಡಳಂತೆ

ಶ್ರದ್ಧಾ ಕಪೂರ್ ಈಗ  ತನ್ನ ಮೊಟ್ಟ ಮೊದಲ ಕಾರು ಕೊಂಡಳಂತೆ
, ಶುಕ್ರವಾರ, 17 ಅಕ್ಟೋಬರ್ 2014 (12:05 IST)
ಇದನ್ನು ಓದಿದಾಗ ಎಲ್ಲರಿಗೂ ವಿಚಿತ್ರ ಅಂತ ಅನ್ನಿಸುತ್ತದೆ. ಕಾರಣ ಇಷ್ಟೇ ಶ್ರದ್ಧಾ ಹುಟ್ಟಿದಾಗಿನಿಂದ ಚಿನ್ನದ ಚಮಚೆ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವಳು. ಅಂದರೆ ಸುಖವಾಗಿ ಬೆಳೆಯುವ ವಾತಾವರಣದಲ್ಲಿದ್ದವಳು. ಆಕೆಯ ತಂದೆ ಬಾಲಿವುಡ್ ಪ್ರಸಿದ್ಧ ಪೋಷಕ-ಖಳ ಮತ್ತು ಹಾಸ್ಯ ನಟ ಶಕ್ತಿ ಕಪೂರ್.
 
.ಕಾರು ಅನ್ನೋದು ಆಕೆಗೆ ಹೊಸ ಸಂಗತಿಯಲ್ಲ. ಆದರೂ ಸಹಿತ ಇದು ನಿಜ. ಬಾಲಿವುಡ್‌ನ ಈ ಕ್ಯೂಟ್ ಗರ್ಲ್ ಈಗ ಹೊಸ ಅದರಲ್ಲೂ ತನ್ನ ಮೊದಲ ಕಾರ್ ಕೊಂಡಿದ್ದಾಳೆ. ಅದು ಅತ್ಯಂತ ಬೆಲೆಬಾಳುವ ಲಗ್ಜುರಿ ಕಾರ್ ಸುವಿ . ಇದಕ್ಕೂ ಮುನ್ನ ಈಕೆ ಒಂದು ಜರ್ಮನ್ ಕಾರ್ ಬಳಸುತ್ತಿದ್ದಳು. ಅದು ಆಕೆಯ ಸ್ವಂತದಲ್ಲವಂತೆ..  
 
ಅವರಪ್ಪ ಶಕ್ತಿ ಕಪೂರ್ ಅವರು ಗಿಫ್ಟ್ ನೀಡಿದ್ದಂತೆ ಹಾಗಂತ ಹೇಳಿದೆ ಪತ್ರಿಕೆಯೊಂದರ ವರದಿ. ಈಗ ಒಂದೇ ಸಮನೆ ಹಿಟ್ ಚಿತ್ರಗಳನ್ನು ನೀಡುತ್ತಿರುವ ಈ ಸುಂದರಿ ಈವರೆಗೂ ಕಾರು ಕೊಂಡೆ ಇಲ್ಲವಾ ಎಂದು ಮೂಗು ಮುರಿದಿದ್ದಾರೆ ಬಾಲಿವುಡ್ ಮಂದಿ. ವಿಷ್ಯ ಏನೇ ಇರಲಿ ಶ್ರದ್ಧಾ ಕಾರ್ ಕೊಂಡಿದ್ದಾಳೆ. ಅದೇ ಮುಖ್ಯ ಸಂಗತಿ. ಅಲ್ಲದೆ ತನ್ನ ಕುಟುಂಬದವರ ಜೊತೆ ಲಾಂಗ್ ರೈಡ್ ಸಹಿತ ಹೋಗಿದ್ದಳಂತೆ. 
 

Share this Story:

Follow Webdunia kannada