Webdunia - Bharat's app for daily news and videos

Install App

ಮಾದಕ ಚೆಲುವೆ ನಯನತಾರ ಐಪಿಎಸ್ ಪಾತ್ರಕ್ಕೆಂದು ಕುದುರೆ ಸವಾರಿ ಕಲಿಕೆ

Webdunia
ಶನಿವಾರ, 1 ನವೆಂಬರ್ 2014 (12:47 IST)
ಸೂಪರ್ ಹೀರೋಗಳ ಜೊತೆಗೆ ಅಭಿನಯಿಸಿ ಸಾಯಿ ಎನಿಸಿಕೊಂಡಿರುವ ಕಲಾವಿದೆ ನಯನತಾರ. ಈ ಬೆಂಗಳೂರಿನ ಚೆಲುವೆ ನಯನ್ ಸೂಪರ್ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿ ಕನ್ನಡಿಗರ ಬಳಿಯಲ್ಲಿಯೂ ಸೈ ಎನಿಸಿಕೊಂಡಳು. 
 
ಅಲ್ಲದೆ ಶ್ರೀರಾಮರಾಜ್ಯ ಎನ್ನುವ ತೆಲುಗು ಚಿತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಹೆಚ್ಚು ಹತ್ತಿರ ಆದಳು. ಅಷ್ಟೇ ಅಲ್ಲದೆ ಆಕೆ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿ ತನ್ನನ್ನು ಹೆಚ್ಚು ಖ್ಯಾತಿಯ ಉತ್ತುಂಗಕ್ಕೆ ಏರಿಸಿಕೊಂಡಳು. ಈಗ ಆಕೆಗೆ ಅಪರೂಪದ ಗೆಲುವು  ದೊರೆತಿದೆ ಚಿತ್ರಂಗದ. ಒಳ್ಳೆಯ ಸ್ಥಾನ ಸಿಕ್ಕಿದೆ. 
 
ಆದರೆ ಇಷ್ಟೆಲ್ಲಾ ಇದ್ದರೂ ಸಹಿತ ಆಕೆ ಲೇಡಿ  ಓರಿಯೆಂಟೆಡ್ ಚಿತ್ರಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಸಾಮಾನ್ಯವಾಗಿ ಒಂದೆರಡು ಚಿತ್ರಗಳಲ್ಲಿ ಗೆದ್ದರೆ ಸಾಕು ಹೀರೋಯಿನ್ ಗಳು ಮಹಿಳಾ ಪ್ರಧಾನ ಚಿತ್ರಕ್ಕೆ ಆದ್ಯತೆ ನೀಡುತ್ತಾರೆ. ಆದರೆ ನಯನ್ ಮಾತ್ರ ಈ ವಿಷಯಕ್ಕೆ ಹೊರತಾಗಿದ್ದಳು. 
 
ಈಗ ತಮಿಳು ಚಿತ್ರ ತನಿ ಒರಿಯನ್ ನಲ್ಲಿ ಆಕೆ ಐಪಿಎಸ್ ಅಧಿಕಾರಿಯ ಪಾತ್ರದ ಮೂಲಕ ಜನರ ಮುಂದೆ ಬರಲು ಸಿದ್ಧ ಆಗಿದ್ದಾಳೆ ಎಂದು ತಮಿಳು ಚಿತ್ರರಂಗದಲ್ಲಿ ಸುದ್ದಿ ಹರಡಿದೆ. ಕಥಾನಾಯಕನಾಗಿ ಜಯಂ ರವಿ ನಟಿಸುತ್ತಿದ್ದಾರೆ. ಆಕ್ಷನ್ ಭರಿತ ಚಿತ್ರವಾಗಿರುವ ತನಿ ಒರುವನ್ ನಲ್ಲಿನ ಅನೇಕ ದೃಶ್ಯಗಳು ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತದೆ ಎಂದು ಹೇಳಿದ್ದಾರೆ ಚಿತ್ರತಂಡ. ಇದರಲ್ಲಿ ಶತ್ರುಗಳನ್ನು ಎದುರಿಸಲು ನಯನ್ ಕುದುರೆ ಸವಾರಿ ಮಾಡುತ್ತಾಳಂತೆ.
 
ದೃಶ್ಯಗಳ ವಾಸ್ತವದಿಂದ ಕೂಡಿರಬೇಕು ಎನ್ನುವ ಕಾರಣದಿಂದ ಕುದುರೆ ಸವಾರಿಯ ಕಲಿಕೆಗೆ ಆದ್ಯತೆ ನೀಡಿದ್ದಾಳಂತೆ ಈ ಚೆಲುವೆ.. ಒಟ್ಟಾರೆ ನಯನತಾರ ಮಾದಕವಾಗಿ ವಿಲನ್ ಗಳ ಜೊತೆ ಫೈಟ್ ಮಾಡುವ ಆನಂದ ಆಕೆಯ ಗಂಡು ಫ್ಯಾನ್ ಗಳಿಗೆ ಒದಗಿಸಿಕೊಡುತ್ತಿದ್ದಾಳೆ ಈ ಚೆಲುವೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?