Select Your Language

Notifications

webdunia
webdunia
webdunia
webdunia

ರೇಪ್ ಕುರಿತ ಸಲ್ಮಾನ್ ಖಾನ್ ಹೇಳಿಕೆಗೆ ಪ್ರಿಯಾಂಕ ಛೋಪ್ರಾ ಹೇಳಿದ್ದೇನು?

ರೇಪ್ ಕುರಿತ ಸಲ್ಮಾನ್ ಖಾನ್ ಹೇಳಿಕೆಗೆ ಪ್ರಿಯಾಂಕ ಛೋಪ್ರಾ ಹೇಳಿದ್ದೇನು?
, ಗುರುವಾರ, 30 ಜೂನ್ 2016 (09:04 IST)
ಮೊನ್ನೆ ತಾನೇ ತಮ್ಮ ಸುಲ್ತಾನ್ ಸಿನಿಮಾದ ಚಿತ್ರೀಕರಣದ ವೇಳೆ ಕುಸ್ತಿಗಾಗಿ ತರಬೇತಿ ಪಡೆಯುತ್ತಿದ್ದ ವೇಳೆ ನಾನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹಾಗೇ ನಡೆದಾಡೋದಕ್ಕೆ ಪರದಾಡುತ್ತಿದ್ದೆ ಅಂತಾ ನಟ ಸಲ್ಮಾನ್ ಖಾನ್ ಅವರು ಹೇಳಿಕೆ ನೀಡಿದ್ದರು. ಸಲ್ಮಾನ್ ಖಾನ್ ಅವರು ಈ ಹೇಳಿಕ ಭಾರೀ ವಿವಾದಕ್ಕೆ ಕಾರಣವಾಗಿತ್ತು.ಆದ್ರೆ ಸಲ್ಲು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.

ಸಲ್ಮಾನ್ ಖಾನ್ ಅವರು ಇಷ್ಟೊಂದು ವಿವಾದಾತ್ಮಕವಾದ ಹೇಳಿಕೆ ನೀಡಿದ್ರೂ ಯಾವೊಬ್ಬ ಸಿನಿಮಾ ತಾರೆಯೂ ಸಲ್ಮಾನ್ ಖಾನ್ ಅವರ ವಿರುದ್ಧವಾಗಿ ಮಾತೇ ಆಡಿರಲಿಲ್ಲ.ಅದರ ಬಗ್ಗೆ ಪ್ರತಿಕ್ರಿಯೆ ನೀಡೋದಕ್ಕೂ ಹಿಂದೇಟು ಹಾಕುತ್ತಿದ್ದರು. ಇನ್ನು ಐಫಾ ಸಮಾರಂಭದಲ್ಲೂ ತಾರೆಯರಾದ ದೀಪಿಕಾ ಪಡುಕೋಣೆ,ಸೋನಾಕ್ಷಿ ಸಿನ್ಹಾ, ಫರ್ಹಾನ್ ಅಖ್ತರ್ ಮುಂತಾದವರೆಲ್ಲಾ ಸಲ್ಮಾನ್ ಖಾನ್ ಅವರೊಂದಿಗೆ ಏನೂ ಆಗಿಲ್ಲ ಎಂಬಂತೆ ಆರಾಮವಾಗಿಯೇ ಇದ್ದರು.ಆದ್ರೆ ನಟಿ ಪ್ರಿಯಾಂಕ ಛೋಪ್ರಾ ಮಾತ್ರ ಹಾಗಲ್ಲ.
 
ಮಾಧ್ಯಮದವರು ಸಲ್ಮಾನ್ ಖಾನ್ ಅವರ ಹೇಳಿಕೆ ಕುರಿತಾಗಿ ಪಿಗ್ಗಿಯಲ್ಲಿ ಕೇಳಿದ ಪ್ರಶ್ನೆಗೆ ಅವರು ಸರಿಯಾದ ಉತ್ತರ ನೀಡಿದ್ದಾರೆ. ನೀವು ನನ್ನನ್ನು ಈ ಬಗ್ಗೆ ಪ್ರಶ್ನೆ ಕೇಳುವ ಬದಲು ಯಾರು ಈ ರೀತಿ ಪ್ರಶ್ನೆ ಕೇಳಿದ್ದಾರೋ ಅವರನ್ನೇ ಹೋಗಿ ಕೇಳಿ. ಒಬ್ಬ ಮಹಿಳೆಯಾಗಿ ಪ್ರತಿಯೊಬ್ಬ ಮಹಿಳೆಗೂ ಇದರ ಬಗ್ಗೆ ಮಾತನಾಡುವ ಅವಕಾಶ ಇದೆ ಅಂತಾ ಅವರು ಹೇಳಿದ್ದಾರೆ.
 
ಅಲ್ಲದೇ ಪ್ರತಿ ದಿನ ದೇಶದಲ್ಲೂ ಅದೆಷ್ಟೋ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ನಾವೆಲ್ಲ ಅವರ ಬಗ್ಗೆ ಯೋಚಿಸುವುದೇ ಇಲ್ಲ.ಸಲ್ಮಾನ್ ಖಾನ್ ಅವರು ನೀಡಿದ ಹೇಳಿಕೆಯನ್ನು ಇನ್ನಷ್ಟು ದೊಡ್ಡ ಮಾಡಲು ನಾನು ಬಯಸೋದಿಲ್ಲ.ನಾನು ನಿಜವಾದ ಪರಿಸ್ಥಿತಿಯ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಇಂತಹ ಹೇಳಿಕೆಗಳನ್ನು ದೊಡ್ಡ ಮಾಡುವ ಬದಲು ಅತ್ಯಾಚಾರಕ್ಕೆ ಒಳಗಾಗಿ ನರಳಾಡುತ್ತಿರುವ ಮಹಿಳೆಯರ ಪರ ಧ್ವನಿ ಎತ್ತಿ ಅಂತಾ ಅವರು ಹೇಳಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಲ್ತಾನ್ ಸಿನಿಮಾ ಸಲ್ಮಾನ್ ಖಾನ್ ಅವರ ಅತೀ ಉದ್ದದ ಚಿತ್ರ