Webdunia - Bharat's app for daily news and videos

Install App

ಮೆಚ್ಚಿನ ಮುನ್ನಿಗೆ ಸಲ್ಲು ನೀಡಿದ ಗಿಫ್ಟ್ ಏನು ಗೊತ್ತೆ?

Webdunia
ಬುಧವಾರ, 29 ಜುಲೈ 2015 (11:32 IST)
ತಮ್ಮ ಸಹನಟರಿಗೆ ಪ್ರೋತ್ಸಾಹ, ಆದರ ತೋರುವುದರಲ್ಲಿ ಸಲ್ಲು ಮಿಯಾ ಸದಾ ಮುಂದು. ಅಂತಹದ್ದರಲ್ಲಿ ಇತ್ತೀಚಿಗೆ ಬಿಡುಗಡೆಯಾದ ಬಜರಂಗಿ ಭಾಯಿಜಾನ್ ಚಿತ್ರದಲ್ಲಿ ಅವರ ಜತೆ ನಟಿಸಿದ್ದ ಮುದ್ದು ಬಾಲೆ ಹರ್ಷಾಲಿ ಬಗ್ಗೆ ಅವರು ಅತಿಯಾದ ಪ್ರೀತಿ ತೋರುತ್ತಿರುವುದರಲ್ಲಿ ಏನೂ ವಿಶೇಷವಿಲ್ಲ ಬಿಡಿ. 
ಚಿನಕುರಳಿ ಮುನ್ನಿಗೆ ಸಲ್ಲು ಮಾರು ಹೋಗಿದ್ದಾರಂತೆ. ಆಕೆಯ ಚಟ್ ಪಟಾಕಿಯಂತ ಮಾತು, ಮುದ್ದು ಮುಖ, ಅಸಾಮಾನ್ಯ ಪ್ರತಿಭೆ ಸಲ್ಮಾನ್ ಅವರನ್ನು ಪ್ರಭಾವಗೊಳಿಸಿದೆಯಂತೆ. ಚಿತ್ರ ಗೆಲ್ಲಲು ಆಕೆ ಬಹುಮುಖ್ಯ ಕಾರಣಳು ಎಂಬುದು ಸಲ್ಲು ಅಭಿಪ್ರಾಯ. ಆಕೆಗೇನಾದರೂ ಉಡುಗೊರೆ ಕೊಡಲು ಬಯಸಿದ್ದ ಸಲ್ಲು , ಆಕೆಯ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ವಹಿಸಿಕೊಂಡಿದ್ದಾರಂತೆ. ಅದಕ್ಕಾಗಿ ಒಂದುವರೆ ಕೋಟಿ ರೂಪಾಯಿಯನ್ನು ಆಕೆಯ ಪೋಷಕರ ಬಳಿ ನೀಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. 
 
ಈ ಸುದ್ದಿ ಎಷ್ಟು ಸತ್ಯ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಮುನ್ನಿಯ ತಾಯಿಯನ್ನು ಸಂಪರ್ಕಿಸಿದಾಗ, ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. 
 
ಚಿತ್ರಕ್ಕೆ ಆಯ್ಕೆಯಾಗುತ್ತಿದ್ದಂತೆ ನಟ ಸಲ್ಮಾನ್‌ರಲ್ಲಿ ಹರ್ಷಾಲಿ ಈ ಚಿತ್ರದ ಮೂಲಕ ನಿಮ್ಮಂತೆ ನಾನೂ ಸೂಪರ್‌ಸ್ಟಾರ್ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಳಂತೆ.  ಆದರೆ ಆಕೆಯ ಅದ್ಭುತ ಅಭಿನಯ ಸಲ್ಲುಗೆ ಸೆಡ್ಡು ಹೊಡೆಯುವಂತಿದ್ದು, ಆಕೆ ಈಗ ಸ್ವತಃ ಸೂಪರ್ ಸ್ಟಾರ್ ಎನ್ನಿಸಿಕೊಂಡಿದ್ದಾಳೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments