Select Your Language

Notifications

webdunia
webdunia
webdunia
webdunia

ಮಗಳ ಮದುವೆಯ ಸಿದ್ಧತೆಯಲ್ಲಿ ಹ್ಯಾಟ್ರಿಕ್ ಹೀರೋ

ಮಗಳ ಮದುವೆಯ ಸಿದ್ಧತೆಯಲ್ಲಿ ಹ್ಯಾಟ್ರಿಕ್ ಹೀರೋ
, ಬುಧವಾರ, 5 ಆಗಸ್ಟ್ 2015 (09:57 IST)
ಚಂದನವನದಲ್ಲಿ ಮತ್ತೊಂದು ಭರ್ಜರಿ ವಿವಾಹ ಸಮಾರಂಭವೊಂದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುದ್ದಿನ ಮಗಳು ಡಾ. ನಿರುಪಮಾ ಮದುವೆಗೆ ಈಗಾಗಲೇ ದಿನಗಣನೆ ಶುರುವಾಗಿದ್ದು, ದೊಡ್ಡ ಮನೆಯಲ್ಲಿ ಮದುವೆಗಾಗಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇದೇ ತಿಂಗಳ 30 ಹಾಗೂ 31 ರಂದು ನಿರುಪಮಾ ಮದುವೆ ನಡೆಯಲಿದ್ದು, ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿ ಮದುವೆಗೆ ಅತಿಥಿಗಳನ್ನು ಕರೆಯೋದ್ರಲ್ಲಿ ಬ್ಯುಸಿಯಾಗಿದ್ದಾರಂತೆ. ಇನ್ನು ಮೊನ್ನೆಯಷ್ಟು ದಂಪತಿ ಚೆನ್ನೈಗೆ ತೆರಳಿ ರಜಿನಿಕಾಂತ್ ಅವರನ್ನು ವಿವಾಹಕ್ಕೆ ಆಮಂತ್ರಿಸಿದ್ದರು. ಇದೀಗ ಬೆಂಗಳೂರಿನಲ್ಲಿ ವಿವಿಧ ತಾರೆಯರ ಮನೆಗಳಿಗೆ ತೆರಳಿ ವಿವಾಹಕ್ಕೆ ಆಮಂತ್ರಿಸುತ್ತಿದ್ದಾರೆ. 
 
ಈಗಾಗಲೇ ಶಿವಣ್ಣ ರವಿಚಂದ್ರನ್, ದೇವರಾಜ್, ಜಗ್ಗೇಶ್, ಉಪೇಂದ್ರ, ರಕ್ಷಿತಾ ಪ್ರೇಮ್, ಯಶ್, ಅಜಯ್, ರಾಕ್ ಲೈನ್ ವೆಂಕಟೇಶ್ ಮುಂತಾದವರ ಮನೆಗಳಿಗೆ ತೆರಳಿ ಮದುವೆಗೆ ಆಮಂತ್ರಿಸಿದ್ದು, ಇನ್ನುಳಿದ ತಾರೆಗಳ ಮನೆಗೂ ಭೇಟಿ ನೀಡಲಿದ್ದಾರೆ. ಒಟ್ಟಿನಲ್ಲಿ ರಾಜ್  ಮೊಮ್ಮಗಳ ಮದುವೆ ನೋಡಲು ಇಡೀ ರಾಜ್ಯವೇ ಕಾತುರದಿಂದ ಕಾಯುತ್ತಿದೆ.

Share this Story:

Follow Webdunia kannada