Select Your Language

Notifications

webdunia
webdunia
webdunia
webdunia

ಭಲೇ ಜೋಡಿ ಸಿನಿಮಾದಲ್ಲಿರಲಿದೆ ಹರ್ಷಿಕಾ ಹರಿಪ್ರಿಯಾ ಕೆಮಿಸ್ಟ್ರಿ

ಭಲೇ ಜೋಡಿ ಸಿನಿಮಾದಲ್ಲಿರಲಿದೆ ಹರ್ಷಿಕಾ ಹರಿಪ್ರಿಯಾ ಕೆಮಿಸ್ಟ್ರಿ
, ಬುಧವಾರ, 10 ಫೆಬ್ರವರಿ 2016 (11:12 IST)
ಸ್ಯಾಂಡಲ್ ವುಡ್ ನಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳನ್ನ ನಾವು ಈಗಾಗಲೇ ನೋಡಿದ್ದೇವೆ. ಕಿಚ್ಚ ಸುದೀಪ್ ರವಿಚಂದ್ರನ್, ಜಗ್ಗೇಶ್ ಶಿವರಾಜ್ ಕುಮಾರ್, ಹಾಗೇ ಸುದೀಪ್ ಶಿವರಾಜ್ ಕುಮಾರ್ ಹೀಗೆ ನಾಯಕರು ಜೊತೆಯಾಗಿ ನಟಿಸಿರುವ ಸಿನಿಮಾಗಳನ್ನು ನೋಡಿದ್ದೇವೆ.ಆದ್ರೆ ನಾಯಕಿಯರು ಜೊತೆಯಾಗಿ ನಟಿಸುತ್ತಿರುವ ಸಿನಿಮಾಗಳು ಅತ್ಯಂತ ವಿರಳ. ಆದ್ರೀಗ ಅಂತಹದ್ದೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರ ಸುಮಂತ್ ಶೈಲೇಂದ್ರ ಭಲೇ ಜೋಡಿ ಅನ್ನೋ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಉಗ್ರಂ ಹಾಗೇ ರಿಕ್ಕಿ ಸಿನಿಮಾ ಖ್ಯಾತಿ ಹರಿಪ್ರಿಯಾ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಬಂದ ಸುದ್ದಿಗಳ ಪ್ರಕಾರ ನಟಿ ಹರ್ಷಿಕಾ ಪೂಣಚ್ಚ ಕೂಡ ಇದೇ ಸಿನಿಮಾದಲ್ಲಿ ಈ ಇಬ್ಬರು ನಾಯಕಿಯರ ಜೊತೆ ಅಭಿನಯಿಸುತ್ತಿದ್ದಾರಂತೆ.
 
ಇನ್ನು ಹರ್ಷಿಕಾ, ಹರಿಪ್ರಿಯಾ ಹಾಗೇ ಶಾನ್ವಿ ಈ ಮೂವರು ಒಂದೇ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರೋದರಿಂದ ಅವರೆಲ್ಲರ ಕಾಂಬಿನೇಷನ್ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.ಅಂದ್ಹಾಗೆ ಸಿನಿಮಾದಲ್ಲಿ ಹರ್ಷಿಕಾ ಅವರದ್ದು ಗೆಸ್ಟ್ ರೋಲ್ ಅಂತೆ. ಆದ್ರೂ ಹೇಗಿರುತ್ತೆ ಮೂವರ ಕೆಮಿಸ್ಟ್ರಿ ಅನ್ನೋದು ಅಭಿಮಾನಿಗಳ ಕುತೂಹಲ.

Share this Story:

Follow Webdunia kannada