Webdunia - Bharat's app for daily news and videos

Install App

ಮಾನವೀಯತೆಯ ಮತ್ತೊಂದು ರೂಪ ಹನ್ಸಿಕಾ ಮೋಟ್ವಾನಿ.

Webdunia
ಗುರುವಾರ, 6 ನವೆಂಬರ್ 2014 (13:10 IST)
ಸಮಾಜ ಸೇವೆಯನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡಿದ್ದಾರೆ ಹಲವರು. ಅದರಲ್ಲೂ ಚಿತ್ರಕಲಾವಿದರು ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಆದರೆ ಯಾವುದೇ  ರೀತಿಯಲ್ಲೂ ಸಮಾಜಕ್ಕೆ ಕಿಂಚತ್ತು ಸಹಾಯ ಮಾಡುವ ಮನಸ್ಸಿಲ್ಲದೆ ಗಾಳಿ ಬಂದಾಗ ತೂರಿಕೋ ಎನ್ನುವಂತೆ  ಮನಸ್ಥಿತಿ ಇರುವವರು ಸಹಿತ ಹೇರಳವಾಗಿದ್ದಾರೆ. 
 
ಆದರೆ ನಟಿ ಹನ್ಸಿಕಾ ಮಾತ್ರ ತುಂಬಾ ಭಿನ್ನ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದ್ದಾಳೆ . ಆಕೆಯು ಗಳಿಸಿದ ಮೊತ್ತದಲ್ಲಿ ಸ್ವಲ್ಪ ಪ್ರಮಾಣವನ್ನು ಬಡವರಿಗೆ ನೀಡುವ ಕೆಲಸ ಮಾಡುತ್ತಿದ್ದಾಳೆ ಈ ಹುಡುಗಿ. 
 
ತನ್ನ ವಯಸ್ಸು ಕಿರಿಯದಾದರೂ ಆದರ್ಶದ ವಿಷಯದಲ್ಲಿ ತುಂಬಾ ದೊಡ್ಡತನ ಹೊಂದಿರುವ ಈ ಹೆಣ್ಣುಮಗಳು ಈಗಾಗಲೇ 23 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳೆ. ಅವರ ರಕ್ಷಣೆ ಮಾಡುತ್ತಿರುವ ಈ ಮಹೋನ್ನತ ವ್ಯಕ್ತಿತ್ವವಾದ ಹನ್ಸಿಕ ತನಗೆ ವಿರಾಮ ದೊರೆತರೆ ಸಾಕು ಮಕ್ಕಳನ್ನು ಭೇಟಿ ಮಾಡಲು ಹೊರಟು ಹೋಗುತ್ತಾಳಂತೆ..
 
ಈಕೆ ಇತ್ತೀಚಿಗೆ ಜನ ಬಳಿ ಒಂದು ಮನವಿ ಮಾಡಿದ್ದಾಳೆ. ನಿಮ್ಮ ಹುಟ್ಟು ಹಬ್ಬದ ದಿನ ಇಲ್ಲವೇ ಯಾವುದಾದರು ವಿಶೇಷವಾದ ಸಂದರ್ಭದಲ್ಲಿ ಬಡವರಿಗೆ, ಅಂಗವಿಕಲರಿಗೆ ಅನ್ನದಾನ ಮಾಡಿ. ನಿಮ್ಮ ಗಳಿಕೆಯ ಸ್ವಲ್ಪ ಭಾಗ ಅಂತಹವರಿಗಾಗಿ ಮೀಸಲಿಡಿ. ನಾನು ಸಾಮಾನ್ಯವಾಗಿ ನನ್ನ ಹುಟ್ಟು ಹಬ್ಬಕ್ಕೆಂದು ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾಳೆ. ಈಕೆಯ ಸಮಾಜಮುಖಿ ವ್ಯಕ್ತಿತ್ವ ಸಮಾಜಕ್ಕೆ ಮಾದರಿ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments