Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಮನೆ ನಿರ್ಮಾಣಕ್ಕಾಗಿ ಹನ್ಸಿಕಾ ಕೊಂಡ ಜಾಗ ಒಂದು ಎಕರೆ

ಮುಂಬೈನಲ್ಲಿ ಮನೆ ನಿರ್ಮಾಣಕ್ಕಾಗಿ ಹನ್ಸಿಕಾ ಕೊಂಡ ಜಾಗ ಒಂದು ಎಕರೆ
, ಶುಕ್ರವಾರ, 30 ಜನವರಿ 2015 (09:36 IST)
ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳು ಚಿತ್ರಂಗದ ಪ್ರೀತಿಯ ನಟಿ ಹನ್ಸಿಕಾ ಮೋಟ್ವಾನಿ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಉತ್ತರ ಭಾರತದ ಚೆಲುವೆ ತನಗೊಂದು ನೆಲೆ ಕಂಡಿದ್ದು ಮಾತ್ರ ದಕ್ಷಿಣ ಭಾರತದಲ್ಲಿ. ಆಕೆಯನ್ನು ತಮಿಳು ಜನರು ಕಾಪಾಡಿ ಬೆಳೆಸಿ, ಉತ್ತಮ ನಟಿಯನ್ನಾಗಿ ಮಾಡಿದ್ದಲ್ಲದೆ ಆಕೆಗೆ ಹೇರಳ ಅವಕಾಶಗಳು ಸಿಗುವಂತೆ ಮಾಡಿದರು. ಜೊತೆಗೆ ಟಾಲಿವುಡ್ ನವರು ಅವಕಾಶ ನೀಡಿ ಕಾಪಾಡಿದ್ದಾರೆ. ಈಗ ಬಂದ ಸುದ್ದಿ ಅಂದರೆ ಆಕೆ ತನ್ನ ಮುಂದಿನ ಬದುಕಿನ ಬಗ್ಗೆಯೂ ತುಂಬಾ ಎಚ್ಚರದಿಂದ ಅಡಿ ಇಟ್ಟಿದ್ದಾಳೆ. ಈಗ ಆಕೆ ಮುಂಬೈ ನಲ್ಲಿ ಜಾಗ ಕೊಂಡಿದ್ದಾಳಂತೆ. 
ಸುಮಾರು ಒಂದು ಎಕರೆಗಳಷ್ಟು ದೊಡ್ಡದಾದ ಜಾಗವನ್ನು ಆಕೆ ಅದು ಅಂತಹ ಮಹಾನಗರದಲ್ಲಿ ಕೊಂಡಿದ್ದಾಳೆ ಎಂದರೆ ಆಕೆಯ ತಾಕತ್ತಿನ ಬಗ್ಗೆ ಹೇಳ  ಬೇಕಿಲ್ಲ. ಅಷ್ಟು ದೊಡ್ಡ ಜಾಗದಲ್ಲಿ ಬಂಗಲೆ ಕಟ್ಟುತ್ತಾಳ ಆಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು ಅದಕ್ಕೆ ಉತ್ತರವಾಗಿ ಹನ್ಸಿಕ ಹೇಳುವುದಿಷ್ಟೇ, ಇದು ಬಹಳ ದಿನದ ಕನಸು, ಈಗ ನನಸಾಗಿದೆ. ನಗರದ ಹೊರ ಭಾಗದಲ್ಲಿ ಕೊಂಡಿರುವುದು. ಮುಂದೆ ನನಗೆ ಕೆಲಸ ಮಾಡಲು ಆಗದೆ ಇದ್ದಾಗ ಆರಾಮವಾಗಿ ಕಾಲ ಕಳಿಯ ಬೇಕಲ್ಲ. ಅದಕ್ಕೆ ಈಗಿನಿಂದ ಈ ರೀತಿ ಸಿದ್ಧ ಆಗಿರುವುದು. ಮನೆ ಕಟ್ಟೋಕೆ  ಅಷ್ಟೊಂದು ಹಣ ಇಲ್ಲ, ಅದಕ್ಕಾಗಿ ಹಣವನ್ನು ಶೇಖರಿಸ ಬೇಕು,ಅದನ್ನು ಹೊಂದಲು ದುಡಿಯ ಬೇಕು ಎಂದು ಆಕೆ ಹೇಳಿದ್ದಾಳೆ. ಈಕೆಯ ಭವಿಷ್ಯದ ಯೋಜನೆ ಬಗ್ಗೆ ಎಲ್ಲರು ಬೆರಗಾಗಿದ್ದಾರೆ.
 

Share this Story:

Follow Webdunia kannada