Select Your Language

Notifications

webdunia
webdunia
webdunia
webdunia

ವಿವಾಹಕ್ಕೆ ಮೋದಿಗೆ ಆಮಂತ್ರಣ ನೀಡಿದ ಹರ್ಭಜನ್ ಸಿಂಗ್

ವಿವಾಹಕ್ಕೆ ಮೋದಿಗೆ ಆಮಂತ್ರಣ ನೀಡಿದ ಹರ್ಭಜನ್ ಸಿಂಗ್
, ಸೋಮವಾರ, 12 ಅಕ್ಟೋಬರ್ 2015 (11:44 IST)
ಇಡೀ ದೇಶವೇ ಎದುರು ನೋಡುತ್ತಿರಕುವ ವಿವಾಹ ಸಮಾರಂಭವೊಂದಕ್ಕೆ ತಯಾರಿ ಜೋರಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರ ವಿವಾಹಕ್ಕೆ ಈಗಾಗಲೇ ದಿನಗಣನೆ ಆರಂಭವಾಗಲಿಗದೆ.
ಭಜ್ಜಿ ಇದೇ ತಿಂಗಳ 29ರಂದು ತಮ್ಮ ಪ್ರಿಯತಮೆ ಗೀತಾ ಬಾಸ್ರಾ ಅವರನ್ನು ವರಿಸಲಿದ್ದಾರೆ. ಜಲಂಧರ್ ನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಫಗ್ವಾರದ ಹೋಟೆಲ್ ಒಂದರಲ್ಲಿ ವಿವಾಹ ನೆರವೇರಲಿದೆ. ಈಗಾಗಲೇ ಇಬ್ಬರೂ ಆಮಂತ್ರಣ ಪತ್ರಿಕೆ ಹಂಚೋದರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ವಿವಾಹಕ್ಕೆ ಇಬ್ಬರಿಗೂ ಉಡುಪುಗಳು ಸಿದ್ಧವಾಗುತ್ತಿದೆ. ಹರ್ಭಜನ್ ವಿವಾಹದ ದಿನ ಶೇರ್ವಾನಿಯಲ್ಲಿ ಮಿಂಚಿದ್ರೆ, ಗೀತಾ ಗಾದಗ್ರ ಧರಿಸಲಿದ್ದಾರೆ.
 
ಇನ್ನು ವಿವಾಹಕ್ಕೆ ಎಲ್ಲರನ್ನು ಆಮಂತ್ರಿಸೋದರಲ್ಲಿ ಬ್ಯುಸಿಯಾಗಿರುವ ಭಜ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಮಂತ್ರಣ ನೀಡಿದ್ದಾರೆ. ಈಗಾಗಲೇ ಮೋದಿ ಅವರನ್ನು ಭೇಟಿ ಮಾಡಿರುವ ಹರ್ಭಜನ್ ನವೆಂಬರ್ 1 ರಂದು ದೆಹಲಿಯಲ್ಲಿ ನಡೆಯುವ ರಿಸೆಪ್ಶನ್ ಗೆ ಬರುವಂತೆ ಆಹ್ವಾನಿಸಿದ್ದಾರೆ.ಮೋದಿ ಕೂಡ ಬರೋದಾಗಿ ಹೇಳಿದ್ದಾರೆ. ಏನೇ ಆದ್ರೂ ಮದುವೆಯಲ್ಲಿ ತಾರೆಯರ ಸಮಾಗಮವಾಗೋದಂತೂ ನಿಜ

Share this Story:

Follow Webdunia kannada