Select Your Language

Notifications

webdunia
webdunia
webdunia
webdunia

ಜನರು ಸ್ಲಂ ಡಾಗ್ ಬಂದ ಎನ್ನುತ್ತಾರೆ ಎಂಬ ಭಯದಿಂದ ನಟಿಸಲಿಲ್ಲ ಗೋವಿಂದಾ

ಜನರು ಸ್ಲಂ ಡಾಗ್ ಬಂದ ಎನ್ನುತ್ತಾರೆ ಎಂಬ ಭಯದಿಂದ ನಟಿಸಲಿಲ್ಲ ಗೋವಿಂದಾ
bangalore , ಬುಧವಾರ, 29 ಅಕ್ಟೋಬರ್ 2014 (13:10 IST)
ಕಿಲ ಕಿಲ ನಗೆ ಗೋವಿಂದ ಬಾಲಿವುಡ್ ನ ಒಂದು ಕಾಲದ ಸೂಪರ್ ಸ್ಟಾರ್. ಆದರೆ ಆತನ ಒಂದು ಕೆಟ್ಟ ಅಭ್ಯಾಸದಿಂದ ಮೂರು ವರ್ಷಗಳ ಕಾಲ ಮನೆಯಲ್ಲಿ ಉಳಿಯುವ ಪರಿಸ್ಥಿತಿ ಉಂಟಾಯಿತು.ಗೋವಿಂದ ಅವರ ಕೆಟ್ಟ ಅಭ್ಯಾಸ ಎಂದರೆ  ಶೂಟಿಂಗ್ ಗೆ ತಡವಾಗಿ ಬರುವುದಾಗಿದೆ. ಅವರು ಸದಾ ಈ ರೀತಿ ತಡವಾಗಿ ಬರುವುದರಿಂದ ಅವರನ್ನು ಲೇಟ್ ಕಮರ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು. ಆದರೆ ಎಲ್ಲವು ಮುಗಿದು ಈಗ ಮತ್ತೆ ಎಂಟ್ರಿ ಆಗಿದ್ದಾರೆ ಗೋವಿಂದ ಕಿಲ್ ದಿಲ್ ಎನ್ನುವ ಚಿತ್ರದ ಮೂಲಕ.  ಅದೀಗ ಬಿಡುಗಡೆಯತ್ತ ಇದೆ. 
 
ತಮ್ಮ  ಈ ಗುಣದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತ ಹೌದು ನಾನು ಒಂದೊಮ್ಮೆ ಸಿಕ್ಕಾಪಟ್ಟೆ ತಡವಾಗಿ ಬರುತ್ತಿದ್ದೆ, ಅದಕ್ಕೆ ಕಾರಣ ನಾನು ಅನೇಕ ಸಿನಿಮಾಗಳನ್ನು ಒಪ್ಪಿದ್ದೆ. ಯಾವ ನಿರ್ದೇಶಕ ಮತ್ತು ನಿರ್ಮಾಪಕ ಬಂದು ಕೇಳಿದರು ಸಹಿತ ನಟಿಸಲು ಸಿದ್ಧವಾಗಿ ಬಿಡುತ್ತಿದ್ದೆ. 
 
ಅತಿಯಾದ ಸಿನಿಮಾಗಳನ್ನು ಒಪ್ಪಿಕೊಂಡ ಕಾರಣದಿಂದ ಸಕಾಲದಲ್ಲಿ ಶೂಟಿಂಗ್ ಗೆ ಬರಲು ಸಾಧ್ಯ ಆಗುತ್ತಿರಲಿಲ್ಲ. ಈವರೆಗೂ ಗೋವಿಂದನ ಅವರ ಕೈ ಬಿಟ್ಟ ಚಿತ್ರಗಳಲ್ಲಿ ತಾಲ್, ಸ್ಲಂ ಡಾಗ್ ಮಿಲಿಯನೇರ್ ಚಿತ್ರಗಳು ಸಹಿತ ಸೇರಿವೆ.ಸ್ಲಂ ಡಾಗ್ ಟೈಟಲ್ ಇಷ್ಟ ಆಗದ ಕಾರಣ ತಾನು ಆ ಚಿತ್ರದಲ್ಲಿ ನಟಿಸಲು ಸಮ್ಮತಿಸಲಿಲ್ಲ. ಆಗ ನಾನು ರಾಜಕೀಯದಲ್ಲಿದ್ದೆ. ಆ ಟೈಟಲ್  ಮುಂದಿಟ್ಟುಕೊಂಡು ಜನರು ಸ್ಲಂ ಡಾಗ್ ಬಂದ ಎಂದು ಕಾಲೆಳೆಯುತ್ತಾರೆನ್ನುವ  ಭಯದಿಂದ ಆ ಸಿನಿಮಾ ಒಪ್ಪಲಿಲ್ಲ ಎನ್ನುವ ಸಬೂಬು ಹೇಳಿದ್ದಾರೆ ಈ ಸಮಯದಲ್ಲಿ.
 

Share this Story:

Follow Webdunia kannada