Webdunia - Bharat's app for daily news and videos

Install App

ಮತ್ತೆ 30 ಚಿತ್ರಮಂದಿರಗಳಲ್ಲಿ ವಿಜೃಂಭಿಸಲು ಬರುತ್ತಿದೆ ಗೂಳಿಹಟ್ಟಿ

Webdunia
ಮಂಗಳವಾರ, 7 ಜುಲೈ 2015 (10:48 IST)
ಶಶಾಂಕ್ ರಾಜ್ ಅವರ ನಿರ್ದೇಶನದ ಪವನ್ ಸೂರ್ಯ ಅಭಿನಯದ ಚಿತ್ರ ಗೂಳಿಹಟ್ಟಿ. ಈ ಚಿತ್ರ ಅತ್ಯುತ್ತಮವಾದ ಗಳಿಕೆಯನ್ನು ಮಾಡುತ್ತಿದೆ. ಚಿತ್ರದ ಮೊದಲ ವಾರದಲ್ಲೇ ಒಂದು ಕೋಟಿ ರೂಪಾಯಿಗಳನ್ನು ಈ ಚಿತ್ರ ಗಳಿಕೆ ಮಾಡಿದೆ. ಇದರಿಂದ ಉತ್ತೇಜಿತರಾದ ನಿರ್ಮಾಪಕ ಭಾರ್ಗವ್ ಅವರು ಈಗ ಮತ್ತೊಂದು ಚಿತ್ರದ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ. ಅದರ ಹೆಸರು ಒಡ್ಡೋಲಗ. 
ಭಾರ್ಗವ್ ಅವರ ನಿರ್ಮಾಣದ ಹೊಸ ಚಿತ್ರ ಒಡ್ಡೋಲಗ ಆಗಸ್ಟ್ ತಿಂಗಳಲ್ಲಿ ಲಾಂಚ್ ಆಗಲಿದೆಯಂತೆ. ಅದಕ್ಕೂ ಮುನ್ನ ಗೂಳಿಹಟ್ಟಿ  ನಿರ್ದೇಶಕ ಶಶಾಂಕ್ ರಾಜ್ ಅವರು ಗೂಳಿಹಟ್ಟಿಗೆ ಇನ್ನು ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿ ಸೇರ್ಪಡೆ ಮಾಡುತ್ತಾರಂತೆ. ಅದು ಇನ್ನು ಮುವ್ವತ್ತು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹೊರ ಬಂದಿದೆ. ಒಟ್ಟಾರೆ ಕನ್ನಡ ಚಿತ್ರದ ಯಶಸ್ಸು ಅತ್ಯಂತ ಸಂತಸ ನೀಡುವಂತಹದ್ದು. ಅದರಲ್ಲೂ ಹೊಸ ಕಲಾವಿದರು, ಹೆಚ್ಚು ಜನಪ್ರಿಯತೆ ಪಡೆಯದ ಕಲಾವಿದರು ಇರುವ ಸಿನಿಮಾಗಳು ಈ ರೀತಿ ಬೆಳವಣಿಗೆ ಹೊಂದಿದ್ದರೆ ಅದು ಸ್ವಾಗತಾರ್ಹ. ಗೂಳಿಹಟ್ಟಿಯಲ್ಲಿ ಪವನ್ ನಾಯಕರಾಗಿದ್ದಾರೆ, ತೇಜಸ್ವಿನಿ ನಾಯಕಿಯಾಗಿದ್ದಾರೆ. ಇದರಲ್ಲಿ ಅಪ್ಪು ವೆಂಕಟೇಶ್ ಸಹ ಮುಖ್ಯಪಾತ್ರಧಾರಿಯಾಗಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments