Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್‌ಗೆ ಪತ್ನಿ ಶಿಲ್ಪಾರಿಂದ ಹುಟ್ಟುಹಬ್ಬದ ಭರ್ಜರಿ ಗಿಫ್ಟ್

ಗೋಲ್ಡನ್ ಸ್ಟಾರ್‌ಗೆ ಪತ್ನಿ ಶಿಲ್ಪಾರಿಂದ ಹುಟ್ಟುಹಬ್ಬದ ಭರ್ಜರಿ ಗಿಫ್ಟ್
, ಶುಕ್ರವಾರ, 3 ಜುಲೈ 2015 (10:11 IST)
ಗೋಲ್ಡನ್  ಸ್ಟಾರ್ ' ಗಣೇಶ್ ನಿನ್ನೆಯಷ್ಟೇ 38 ವಸಂತಕ್ಕೆ ಕಾಲಿಸಿದ್ದಾರೆ. ಆದ್ರೆ ಈ ಬಾರಿಯ ಹುಟ್ಟಹಬ್ಬ ಗಣೇಶ್ ಗೆ ಬಿಗ್ ಸಪ್ರೈಸ್ ನೀಡಿದೆ.  ಪ್ರತಿ ಬಾರಿಯ ಗಣಿ ಬರ್ತಡೇಗೆ ಬೈಕ್, ಕಾರು ಹೀಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಾ ಬಂದಿರುವ ಪತ್ನಿ ಶಿಲ್ಪಾ ಈ ವರ್ಷದ ಹುಟ್ಟುಹಬ್ಬಕ್ಕೆ ಬಂಗಲೆಯನ್ನೇ ಪ್ರಸೆಂಟ್ ಮಾಡಿದ್ದಾರೆ. 
ಇನ್ನು ಈ ಬಾರಿಯ ತಮ್ಮ ಬರ್ತಡೇಯನ್ನು ಗಣೇಶ್  ಇದೇ  ಮನೆಯಲ್ಲೇ  ಅಭಿಮಾನಿಗಳ ಸಮ್ಮುಖದಲ್ಲಿ    ಆಚರಿಸಿಕೊಂಡಿದ್ದಾರೆ . ಗಣೇಶ್  ಮತ್ತು  ಶಿಲ್ಪಾ  ಕಳೆದ  ಕೆಲವು  ವರ್ಷಗಳಿಂದ  ಬೆಂಗಳೂರಿನ ರಾಜರಾಜೇಶ್ವರಿ  ನಗರದಲ್ಲಿ ನಿರ್ಮಿಸುತ್ತಿದ್ದ ತಮ್ಮ ಬಂಗಲೆಯ ಕೆಲಸ ಕಾರ್ಯಗಳು ಇದೀಗ  ಪೂರ್ಣಗೊಂಡಿದ್ದು. ಅಲ್ಲೇ ಗಣೇಶ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇನ್ನು ಇಟಾಲಿಯನ್ ಶೈಲಿಯಲ್ಲಿ ನಿರ್ಮಿಸಿರುವ ಈ ಮನೆ ಐದು ಅಂತಸ್ತಗಳನ್ನು ಹೊಂದಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಿಲ್ಪಾ ಗಣೇಶ್ ಅವರೇ ಮುಂದೆ ನಿಂತು ಈ ಮನೆಯನ್ನು ನಿರ್ಮಿಸಿದ್ದಾರೆ.
 
ಬರ್ತಡೇ ದಿನವೇ ಗಣೇಶ್ ಅಭಿನಯಿಸುತ್ತಿರುವ 25ನೇ ಸಿನಿಮಾ ಬುಗುರಿ ಸಿನಿಮಾದ ಆಡಿಯೋ ಕೂಡ ರಿಲೀಸ್ ಆಗಿದೆ. ಅಲ್ಲದೇ ಇನ್ನೊಂದು ಬಹು ನಿರೀಕ್ಷಿತ ಸಿನಿಮಾ ಪಟಾಕಿಯ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಪಟಾಕಿ ಸಿನಿಮಾದಲ್ಲಿ ಗಣೇಶ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಮೀಸೆ ಬಿಟ್ಟಿರುವ ಗಣೇಶ್ ಈ ಬಾರಿ ಬರ್ತಡೇಯಲ್ಲೂ ತಮ್ಮ ಮೀಸೆಯೊಂದಿಗೆ ಮಿಂಚುತ್ತಿದ್ದರು.

Share this Story:

Follow Webdunia kannada