Select Your Language

Notifications

webdunia
webdunia
webdunia
webdunia

ಡೈರೆಕ್ಟರ್ ಕ್ಯಾಪ್ ಧರಿಸಲಿರೋ ಗೋಲ್ಡನ್ ಸ್ಟಾರ್

ಡೈರೆಕ್ಟರ್ ಕ್ಯಾಪ್ ಧರಿಸಲಿರೋ ಗೋಲ್ಡನ್ ಸ್ಟಾರ್
, ಗುರುವಾರ, 27 ಆಗಸ್ಟ್ 2015 (09:31 IST)
ಗೋಲ್ಡನ್ ಸ್ಟಾರ್ ಗಣೇಶ್ ಈಗ ಥಿಯೇಟರ್ ನಲ್ಲಿ ಬುಗುರಿ ಆಡ್ತಿದ್ದಾರೆ. ಬಾಕ್ಸ್ ಆಫೀಸ್ ನಲ್ಲ ಬುಗುರಿಯ ಸದ್ದು ಮಾಡ್ತಿದೆ. ಉಪ್ಪಿ2 ಹವಾದ ನಡುವೆಯೂ ಬುಗುರಿ ತಿರುಗೋದು ನಿಂತಿಲ್ಲ. ಈ ಸಕ್ಸನ್ ನಾಂಗಿ ಗೋಲ್ಡ್ ನ್ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರ ಜೊತೆಗೆ ಹೊಸ ಗುಟ್ಟೊಂದನ್ನ ಗಣೇಶ್ ಬಿಟ್ಟುಕೊಟ್ಟಿದ್ದಾರೆ. ಲಾಂಗ್ ಗ್ಯಾಪ್ ನ ನಂತ್ರ ಮತ್ತೆ ಗೋಲ್ಡನ್ ಸ್ಟಾರ್ ಆಕ್ಷನ್ ಕಟ್ ಹೇಳೋದಕ್ಕೆ ಮುಂದಾಗಿದ್ದಾರೆ.
  
ಈ ಹಿಂದೆ 2010ರಲ್ಲಿ ಗಣೇಶ್ ತಮ್ಮದೇ ಹೋಂ ಬ್ಯಾನರ್ ನ ಕೂಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಟನೆಯ ಜೊತೆಗೆ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ರು. ಕೂಲ್ ಗಾಂಧಿನಗರದಲ್ಲಿ ಅವರೇಜ್ ಹಿಟ್ ಆಗಿತ್ತು. ಕೂಲ್ ಚಿತ್ರದ ಮೂಲಕ ಗಣೇಶ್ ಕ್ಯಾಫ್ಟನ್ ಆಗಿದ್ರು. ಅದಾದ ಬಳಿಕ ಮತ್ತೆ ಗಣೇಶ್ ನಿರ್ದೇಶಕನಾಗೋದಕ್ಕೆ ಮನಸ್ಸು ಮಾಡಿರಲಿಲ್ಲ. ಅದಾಗ್ಲೇ ಮಾರ್ಕೆಟ್ ನಲ್ಲಿ ಗೋಲ್ಡನ್ ವರ್ಚಸ್ಸು ಕಡಿಮೆಯಾಗ್ತಿದ್ದ ಹಾಗೆ ಕೇವಲ ಆಕ್ಟಿಂಗ್ ಕಡೆಗೆ ಮಾತ್ರ ಗಮನಹರಿಸಿದ್ರು.
 
ಇದೀಗ ಗೋಲ್ಡನ್ ಸ್ಟಾರ್ ಸಿನಿಮಾಗಳು ಮತ್ತೆ ಜನರನ್ನ ಥಿಯೇಟರ್ ನತ್ತ ಸೆಳೆಯುತ್ತಿರೋದ್ರಿಂದ 25ನೇ ಚಿತ್ರವನ್ನು ಮುಗಿಸಿದ್ದಾರೆ. ಇದೇ ಹುಮ್ಮಸಿನಲ್ಲಿ ಗಣೇಶ್ ಈಗ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಲು ಮುಂದಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಈ ವರ್ಷದ ಕೊನೆಯಲ್ಲಿ ಗಣೇಶ್ ಮತ್ತೆ ಡೈರೆಕ್ಟರ್ ಆಗಲಿದ್ದಾರೆ. ಈ ಸಿನಿಮಾಕ್ಕೂ ಶಿಲ್ಪಾಗಣೇಶ್ ಹಣ ಹೂಡುವ ಸಾಧ್ಯತೆಯಿದ್ದು ಮಾತುಕತೆಯ ಹಂತದಲ್ಲಿದೆ.  

Share this Story:

Follow Webdunia kannada