Select Your Language

Notifications

webdunia
webdunia
webdunia
webdunia

ಡಬ್ಬಿಂಗ್ ಕಾರ್ಯದಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತಂಡ

ಡಬ್ಬಿಂಗ್ ಕಾರ್ಯದಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತಂಡ
, ಗುರುವಾರ, 2 ಜುಲೈ 2015 (09:57 IST)
ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ಇದೀಗ ಮತ್ತೆ ಪ್ರೇಕ್ಷಕರೆದುರು ಬರೋಕೆ ಭರ್ಜರಿ ತಯಾರಿ ನಡೆಸಿದ್ದಾರೆ. ಇಷ್ಟು ದಿನ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ರಕ್ಷಿತ್ ಶೆಟ್ಟಿ, ಇದೀಗ ಸಿನಿಮಾದ ಡಬ್ಬಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ.
ಅಂದ್ಹಾಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಸ್ಪೆಷಾಲಿಟಿ ಅಂದ್ರೆ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ತಂದೆಯಾಗಿ ಅನಂತ್ ನಾಗ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈಗಾಗಲೇ ವಾಸ್ತು ಪ್ರಕಾರ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನೋಡಿರುವ ಅಭಿಮಾನಿಗಳು ಇದೀಗ ಮತ್ತೆ ಗೋಧಿ ಬಣ್ಣ ಮೈಕಟ್ಟು ಸಿನಿಮಾದಲ್ಲೂ ಮತ್ತೆ ಅವರಿಬ್ಬರನ್ನು ನೋಡೋ ಅವಕಾಶ ಸಿಕ್ಕಿರುವುದಕ್ಕೆ ಫುಲ್ ಖುಷ್ ಆಗಿದ್ದಾರೆ.
 
ಈಗಾಗಲೇ ತಮ್ಮ ಪ್ರೋಮೋ, ಟೀಸರ್, ಟ್ರೈಲರ್ ಮೂಲಕ ಸದ್ದು ಮಾಡುತ್ತಲೇ ಬಂದಿರುವ ಗೋಧಿ ಬಣ್ಣ ಸಾಧಾರಣ ಮೈಕಟ್ಟು  ಸಿನಿಮಾದ ಶೂಟಿಂಗ್ ಇದೀಗ ಭರದಿಂದ ನಡೆಯುತ್ತಿದ್ದು, ಆದಷ್ಟು ಬೇಗ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿದೆ.
 

Share this Story:

Follow Webdunia kannada