Webdunia - Bharat's app for daily news and videos

Install App

ಹಸೆಮಣೆಗೇರಲಿದ್ದಾರೆ ಸೋಹಾ ಮತ್ತು ಕುನಾಲ್...?

Webdunia
ಶುಕ್ರವಾರ, 23 ಜನವರಿ 2015 (09:28 IST)
ಅನೇಕ ಜೋಡಿಗಳು ಪ್ರೇಮಿಸಿ, ಸಹಜೀವನ ನಡೆಸಿ ಅಂತಿಮವಾಗಿ ತಾವು ಮದುವೆ ಆಗೋದೇ ಸರಿ ಎನ್ನುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಆ ಪಟ್ಟಿಗೆ ಅಂದಕಾಲತ್ತಿನ ಪ್ರಸಿದ್ಧ ನಟಿ ಶರ್ಮಿಳಾ ಟಾಗೂರ್ ಮಗಳಾದ ಸೋಹ ಅಲಿಖಾನ್ ಸಹಿತ ಸೇರ್ಪಡೆ ಆಗಿದ್ದಾಳೆ. ಮುದ್ದಾದ ಚೆಲುವೆ ಸೋಹಾ ಅಲಿ ಖಾನ್ ಇದೆ ತಿಂಗಳು 25ರಂದು ಅಂದರೆ ಭಾನುವಾರ ತನ್ನ ಗೆಳೆಯ ಕುನಾಲ್ ಖೇಮು ಜೊತೆ ಸರಳವಾಗಿ ಮದುವೆ ಆಗುತ್ತಿದ್ದಾಳೆ. ಕೆಲವೇ ಕೆಲವು ಮಂದಿ ಆಪ್ತರ ಎದುರು ಆಕೆ ಸರಳವಾಗಿ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾಳೆ.

ಈ ಮದುವೆ ಕಾರ್ಯಕ್ರಮ ವಿಶೇಷವಾಗಿ ಮರೆಯದಂತೆ ಇರ ಬೇಕು ಎನ್ನುವ ಆಶಯ ಹೊಂದಿದ್ದಾಳೆ ಈಕೆ.  ಸಹೋದರ ಸೈಫ್ ಅಲಿ ಖಾನ್ ಮದುವೆ ಆದ ಸಮಯದಲ್ಲಿ ಕರೀನ ಧರಿಸಿದಂತಹ ಮದುವೆ ಉಡುಪು ನೀನು ಯಾಕೆ ಧರಿಸಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಆಕೆ, ಅದು ನನ್ನ ಅಪ್ಪನ ಅಮ್ಮನದ್ದು, ಅದನ್ನು ಆಕೆಯ ಸೊಸೆ (ಶರ್ಮಿಳ ಟಾಗೂರ್ )ಗೆ ನೀಡಿದ್ದರು, ಅದನ್ನು ಬಳುವಳಿಯಾಗಿ ಶರ್ಮಿಳ ತಮ್ಮ ಸೊಸೆ(ಕರೀನಾ)ಗೆ ನೀಡಿದ್ದರು ಎಂದು ಹೇಳಿದ್ದಾಳೆ.

36 ರ ಹರೆಯದ ಈ ಚೆಲುವೆ. ಸೋಹ ಮತ್ತು ಕುನಾಲ್ ಅವರ ನಿಶ್ಚಿತಾರ್ಥ ಕಳೆದ ವರ್ಷ ಪ್ಯಾರೀಸ್ ನಲ್ಲಿ  ನಡೆದಿತ್ತು. ಕುನಾಲ್ ಸೋಹಾಳಿಗಿಂತ ಐದು ವರ್ಷಗಳಷ್ಟು ಕಿರಿಯ. ಇವರಿಬ್ಬರು 99  ಎನ್ನುವ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ಶರ್ಮಿಳಾಗೆ ಮಗಳ ಮದುವೆ ಸಕತ್ ಖುಷಿ ನೀಡಿದೆ. ವೈವಾಹಿಕ ಬದುಕಿಗೆ ಕಾಲಿಡುತ್ತಿರುವ ಈ ಜೋಡಿಗೆ ಪತ್ರಿಕೆಯು ಶುಭ ಹಾರೈಸುತ್ತದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments