Select Your Language

Notifications

webdunia
webdunia
webdunia
webdunia

ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ರಿತೇಶ್ –ಜೆನಿಲಿಯಾ ಪುತ್ರ

ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ರಿತೇಶ್ –ಜೆನಿಲಿಯಾ ಪುತ್ರ
, ಗುರುವಾರ, 26 ನವೆಂಬರ್ 2015 (10:30 IST)
ಬಾಲಿವುಡ್‌ನ ಕ್ಯೂಟ್ ಕಪಲ್ ಗಳಲ್ಲಿ ಒಬ್ಬರು ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ. ಕಳೆದ ವರ್ಷ ಜೆನಿಲಿಯಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಪುತ್ರ ರಿಯಾನ್ ನಿನ್ನೆ ತಾನೇ ತನ್ನ ಮೊದಲ ವರ್ಷದ ಬರ್ತಡೇಯನ್ನು ಆಚರಿಸಿಕೊಂಡ.

ಮಗ ಮೊದಲ ವರ್ಷ ಬರ್ತಡೇ ಆಚರಿಸಿಕೊಂಡಿರೋದಕ್ಕೆ ರಿತೇಶ್ ದೇಶಮುಖ್  ಹಾಗೂ ಜೆನಿಲಿಯಾ ಫುಲ್ ಖುಷಿಯಾಗಿದ್ದಾರೆ. ಇಬ್ಬರೂ ತಮ್ಮ ಮಗನಿಗೆ ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ. ರಿಯಾನ್ ಫೋಟೋ ಶೇರ್ ಮಾಡಿಕೊಂಡಿರುವ ರಿತೇಶ್ ಹಾಗೂ ಜೆನಿಲಿಯಾ. ನೀನು ಬಂದ ಮೇಲೆ ನಮ್ಮ ಜೀವನ ತುಂಬಾ ಚೆನ್ನಾಗಿದೆ . ಅಲ್ಲದೇ ನನ್ನನ್ನು ತಾಯಿಯಾಗಿಸಿದ್ದಕ್ಕೆ ನಿನಗೆ ಧನ್ಯವಾದಗಳು ಅಂತಾ ಜೆನಿಲಿಯಾ ಹೇಳಿದ್ದಾರೆ. ಇನ್ನು ಮುದ್ದಾಗಿರುವ ರಿಯಾನ್ ಬಾಲಿವುಡ್‌ನ ಕ್ಯೂಟ್ ಮಕ್ಕಳಲ್ಲಿ ಒಬ್ಬನಂತೆ.
 
ಇನ್ನು ಇಷ್ಟು ದಿನ ಮನೆ ಸಂಸಾರ ಮಗು ಅಂತ ಬ್ಯುಸಿಯಾಗಿದ್ದ ಜೆನಿಲಿಯಾ ಮತ್ತೆ ಬಾಲಿವುಡ್ ಅಂಗಳಕ್ಕೆ ವಾಪಸ್ಸಾಗುತ್ತಿದ್ದಾರೆ.ಅನೀಸ್ ಬಾಜ್ಮಿ ಅವರ ಇಟ್ಸ್ ಮೈ ಲೈಫ್ ಅನ್ನೋ ಸಿನಿಮಾದಲ್ಲಿ ಜೆನ್ನಿ ಅಭಿನಯಿಸುತ್ತಿದ್ದಾರೆ. ರಿತೇಶ್ ಹಾಗೂ ಜೆನಿಲಿಯಾ 2012ರಲ್ಲಿ ವಿವಾಹವಾಗಿದ್ದರು.

Share this Story:

Follow Webdunia kannada