Webdunia - Bharat's app for daily news and videos

Install App

ಬಂಪರ್' ಸಿನಿಮಾದಲ್ಲಿ ಗರುಡಾ ರಾಮ್ ವಿಲನ್..!

Webdunia
ಬುಧವಾರ, 11 ಮಾರ್ಚ್ 2020 (12:52 IST)
ಗರುಡಾ ಎಂಬ ಹೆಸರು ಕೇಳಿದ್ರೆನೆ ಎಲ್ಲರ ಕಣ್ಣ ಮುಂದೆ ಕೆಜಿಎಫ್ ಸಿನಿಮಾದ ಆ ವಿಲನ್ ಬಂದು ನಿಲ್ಲುತ್ತಾನೆ. ಸಧ್ಯ ಕೆಜಿಎಫ್-2ನಲ್ಲೂ ಗರುಡಾ ತನ್ನ ಛಾಪು ಮೂಡಿಸಲು ಸಿದ್ಧವಾಗಿದ್ದಾರೆ. ಕೆಜಿಎಫ್-2ನಲ್ಲಿ ಗರುಡನ ಮುಂದಿನ ಭಾಗ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ಗರುಡಾ ಅಲಿಯಾಸ್ ರಾಮ್ ಅವರ ಪಾತ್ರ ಜನರ ಮನಸ್ಸಲ್ಲಿ ಹೇಗೆ ಅಚ್ಚಾಗಿದೆ ಅಂದ್ರೆ ಈಗಲೂ ಜನ ಕೆಜಿಎಫ್-1ರ ಕಡೆ ದೃಶ್ಯವನ್ನ ಯಾವತ್ತು ಮರೆಯಲು ಸಾಧ್ಯವಿಲ್ಲ, ಗರುಡಾ ಪಾತ್ರ ಜನರ ಮನಸ್ಸಲ್ಲಿ ಅಷ್ಟು ಪ್ರಭಾವ ಬೀರಿದೆ. ಇದೀಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ಬರಲು ರಾಮ್ ರೆಡಿಯಾಗಿದ್ದಾರೆ.
 
 
ಸಿಂಪಲ್ ಸುನಿ‌ ನಿರ್ದೇಶನದ ಬಜಾರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಧನ್ವೀರ್ ಮೊದಲ ಸಿನಿಮಾದ ಮೂಲಕವೇ ಭರವಸೆಯ ನಟನಾಗಿ ಹೊರಹೊಮ್ಮಿದ್ದರು. 'ಬಜಾರ್' ನಂತರ ಸಾಕಷ್ಟು ಆಫರ್ ಗಳು ಬಂದರೂ ಕೂಡ ಒಳ್ಳೆ ಕಥೆಗಾಗಿ ಕಾಯುತ್ತಿದ್ದ ನಟ, ಇದೀಗ 'ಬಂಪರ್' ಎಂಬ ಎರಡನೇ ಸಿನಿಮಾಗೆ ರೆಡಿಯಾಗಿದ್ದಾರೆ. ಈಗಾಗಲೇ 'ಬಂಪರ್' ಸಿನಿಮಾದ ಮುಹೂರ್ತವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವೇರಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಹೊಸ ಹುಡುಗ ಧನ್ವೀರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ರಾಮ್ ಓಕೆ ಎಂದಿದ್ದಾರೆ.
 
 
ಕೆಜಿಎಫ್ ನಲ್ಲಿ ಗರುಡನಾ ಆ ಖಡಕ್ ಎಂಟ್ರಿ, ತುಂಬಾ ಒರಟುತನ, ಮೈ ಜುಮ್ ಎನಿಸುವಂತ ಕ್ರೌರ್ಯ ಎಲ್ಲವೂ ಜನರ ಮನಸ್ಸಿನೊಳಗೆ ಹಾಗೇ ಕುಳಿತು ಬಿಟ್ಟಿವೆ. 'ಬಂಪರ್' ನಲ್ಲಿ ಧನ್ವೀರ್ ಹಾಗೂ ರಾಮ್ ಮುಖಾಮುಖಿಯಾಗಲಿದ್ದು, ಅವರಿಬ್ಬರ ಫೈಟ್ ಕುತೂಹಲ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಡಿಜಿಪಿ ಹುದ್ದೆಗೆ ಮರಳಿದ ನಟಿ ರನ್ಯಾ ರಾವ್‌ ಮಲ ತಂದೆಗೆ ಬಿಗ್‌ ಶಾಕ್‌

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಮುಂದಿನ ಸುದ್ದಿ
Show comments