Select Your Language

Notifications

webdunia
webdunia
webdunia
webdunia

ಇಟಲಿ ಪೇಪರ್‌ನಲ್ಲಿ ಮಿಂಚುತ್ತಿರುವ ಗಣೇಶ್-ರಾಧಿಕಾ ಸಿನಿಮಾ ಸುದ್ದಿ

ಇಟಲಿ ಪೇಪರ್‌ನಲ್ಲಿ ಮಿಂಚುತ್ತಿರುವ ಗಣೇಶ್-ರಾಧಿಕಾ ಸಿನಿಮಾ ಸುದ್ದಿ
, ಗುರುವಾರ, 2 ಜುಲೈ 2015 (11:42 IST)
ಚಂದನವನದ ತಾರೆಗಳು ವಿದೇಶಿ ಪತ್ರಿಕೆಯಲ್ಲಿ ಮಿಂಚಿ ಮಿನುಗಿದ್ದಾರೆ. ಕನ್ನಡ ಚಿತ್ರ ಜೂಮ್. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಪಂದಿತ್ ಅವರು ಅಭಿನಯಿಸಿದ್ದಾರೆ. ಅವರು ಇತ್ತೀಚೆಗೆ ಇಟಲಿ ದೇಶಕ್ಕೆ ಶೂಟಿಂಗ್ ಸಲುವಾಗಿ ಹೋಗಿದ್ದರು. ಆ ಬಗ್ಗೆ ನಾವು ತಿಳಿಸಿದ್ದೆವು.ಹಾಡಿನ ಚಿತ್ರೀಕರಣಕ್ಕೆಂದು ಈ ಸಿನಿತಂಡ ಆ ದೇಶಕ್ಕೆ ಹೋಗಿದ್ದವು. ಅಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ ನಂತರ ಕನ್ನಡ ಸಿನಿತಂಡಕ್ಕೆ ಖುಷಿ ಆಗುವ ವಾತಾವರಣ ಕಲ್ಪಿತವಾಗಿತ್ತು. ಅದಕ್ಕೆ ಕಾರಣ ಇಟಲಿ ದೇಶದ ಪ್ರಸಿದ್ಧ ಪತ್ರಿಕೆ  ಈ ತಿರ್ರೆನೋ ದಲ್ಲಿ ಈ ಚಿತ್ರದ ಬಗ್ಗೆ ಸುದ್ದಿ ಬಂದಿತ್ತು.  
ಇದನ್ನು ಗಣೇಶ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹೇಳಿದ್ದರೆ ಸುಂದರ ನಗರ ಮಾರ್ಮಿ, ಅಲ್ಲಿನ ಪೀಸಾ ಎಂದು ಹೇಳಿರುವುದಲ್ಲದೆ ತಮ್ಮ ಚಿತ್ರದ ಬಗ್ಗೆ ಲೇಖನ ಬಂದಿದೆ ಅಲ್ಲಿನ ಪ್ರಸಿದ್ಧ ಪತ್ರಿಕೆಯಲ್ಲಿ ಎಂದು ಹೇಳಿದ್ದಾರೆ ಗಣೇಶ್ ಅವರು. 

Share this Story:

Follow Webdunia kannada