Select Your Language

Notifications

webdunia
webdunia
webdunia
webdunia

ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್

ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್
, ಮಂಗಳವಾರ, 9 ಫೆಬ್ರವರಿ 2016 (11:35 IST)
ಬೆಳ್ಳಿತೆರೆಯ ತಾರೆಗಳು ಕಿರುತೆರೆಗೆ ಎಂಟ್ರಿ ಕೊಡೋದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೆ ಅನೇಕ ತಾರೆಯರು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಕನ್ನಡದಲ್ಲೂ ಅಂತಹ ಅನೇಕ ತಾರೆಯರಿದ್ದಾರೆ. ಇಷ್ಟು ದಿನ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸುದೀಪ್ ಮೊನ್ನೆಯಷ್ಟೇ ಕಾರ್ಯಕ್ರಮ ಮುಗಿದು ಕಿರುತೆರೆಯಿಂದ ಕೊಂಚ ವಿರಾಮ ಪಡೆದುಕೊಂಡಿದ್ದಾರೆ. ಈಗ ಗಣೇಶ ಸರದಿ.

ಹೌದು.. ಸೂಪರ್ ಮಿನಿಟ್ ಎಂಬ ಗೇಮ್ ಶೋ ಮೂಲಕ ಬೆಳ್ಳಿತೆರೆ ಹಾಗೂ ಕಿರುತೆರೆಯ ಸ್ಟಾರ್ ಗಳನ್ನು ಗೇಮ್ ಮೂಲಕ ಮನರಂಜಿಸಿದ್ದ ಗಣೇಶ್ ಇದೀಗ ಮತ್ತೆ ಅದೇ ಗೇಮ್ ಶೋದ ಮೂಲಕ ಮತ್ತೆ ಬಂದಿದ್ದಾರೆ. ಆ ಮೂಲಕ ಮತ್ತೆ ಒಂದಷ್ಟು ಮಂದಿಯನ್ನು ಆಡಿಸಲು ಗಣೇಶ್ ರೆಡಿಯಾಗಿದ್ದಾರೆ.ಇನ್ನು ಈ ಹಿಂದೆ ಸೂಪರ್ ಮಿನಿಟ್ ನಲ್ಲಿ ಗಣೇಶ್ ತಾರೆಯರನ್ನು ಗೇಮ್ ಶೋಗೆ ಅತಿಥಿಗಳಾಗಿ ಕರೆ ತಂದಿದ್ದರು.ಆದ್ರೆ ಈ ಬಾರಿ ಹಾಗಲ್ಲ. ಈ ಬಾರಿ ಕಾರ್ಯಕ್ರಮ ಸಂಪೂರ್ಣವಾಗಿ ಸಾರ್ವಜನಿಕರಿಗಾಗಿ. ಯಾರು ಬೇಕಾದ್ರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು.
 
ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ವಿವಿಧ ಕಾರ್ಯಕ್ರಮಗಳ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ರಮೇಶ್ ಅರವಿಂದ್, ಐಂದ್ರಿತಾ ರೇ, ಜಗ್ಗೇಶ್, ಶೃತಿ ಹರಿಹರನ್ ಅನೇಕ ತಾರೆಯರು ಕಿರುತೆರೆಯ ಆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದ್ರೆ ಇವರೆಲ್ಲರ ಮಧ್ಯೆ ಗಣೇಶ್ ಯಾವ ರೀತಿ ಸಕ್ಸಸ್ ಕಾಣ್ತಾರೆ ಅನ್ನೋದನ್ನು ಕಾದು ನೋಡ್ಬೇಕು.

Share this Story:

Follow Webdunia kannada