Select Your Language

Notifications

webdunia
webdunia
webdunia
webdunia

ಪುನೀತ್ ಚಿತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಾಜಿ ಮಿಸ್ ಇಂಡಿಯಾ

ಪುನೀತ್ ಚಿತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಾಜಿ ಮಿಸ್ ಇಂಡಿಯಾ
, ಬುಧವಾರ, 25 ಮಾರ್ಚ್ 2015 (10:01 IST)
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ತೋರಲು ಅನೇಕ ನಟಿಮಣಿಯರು ಬಂದಿದ್ದಾರೆ. ಊರ್ವಶಿ ರುಟೇಲ ನಂತರ ಸಂಗೀತ ಚೌಹಾನ್, ಶುಭ್ರ ಅಯ್ಯಪ್ಪ ನಂತರ ಈಗ ಹೊಸ ಸೇರ್ಪಡೆ ಅಂದರೆ ಮಾಜಿ ಮಿಸ್ ಇಂಡಿಯ ಆಗಿರುವ ಸೋನಂ ಬವೇಜಾ. ಕನ್ನಡ ಚಿತ್ರರಂಗದಲ್ಲಿ ತನ್ನ ರಾಶಿ ರಾಶಿ ರೂಪ ತೋರಲು ಈ ತಾರೆ ಬರುತ್ತಿದ್ದಾಳೆ.   \
ಈ ಪಂಜಾಬಿ ಹುಡುಗಿ ಇತ್ತೀಚೆಗಷ್ಟೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಎಂಟ್ರಿ ಆದಳು. ಆಕೆಯ ಆಕೆಯ ಮೊದಲ ತಮಿಳು ಚಿತ್ರ ಕಪ್ಪಲ್. ಈಗ ಈ ತಾರೆ ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಮೂಲಕ ಚಂದನವನಕ್ಕೂ ಬಂದಿದ್ದಾಳೆ. ಎಂಗೆಯುಂ ಎಪ್ಪೋತುಂ ಫೇಮ್ ನಿರ್ದೇಶಕ ಸರವಣನ್ ಅವರು ಆಕೆಯನ್ನು ತಮ್ಮ ತಮಿಳು ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಅಲ್ಲದೆ ಪುನೀತ್ ನಟನೆಯ ಮತ್ತು ಅವರ ನಿರ್ದೇಶನದ ಕನ್ನಡ ಚಿತ್ರಕ್ಕೂ ಸಹಿತ ಸೋನಂ ಆಯ್ಕೆ ಆಗಿದ್ದಾಳೆ.ಈ ಸಂಗತಿಯನ್ನು ಖುದ್ದು ಸರವಣನ್ ಹೇಳಿದ್ದಾರೆ.

Share this Story:

Follow Webdunia kannada