Webdunia - Bharat's app for daily news and videos

Install App

ಧನುಷ್ ಕನ್ನಡದ ಹಾಡಿಗೆ ನಾಲ್ಕು ಲಕ್ಷ ರೂ ರಿಸ್ಟ್ ವಾಚ್ ಕಾಣಿಕೆ

Webdunia
ಶನಿವಾರ, 18 ಅಕ್ಟೋಬರ್ 2014 (14:15 IST)
ಧನುಷ್ ಹಾಡಿದ್ದಾರೆ ಕನ್ನಡ ಚಿತ್ರಕ್ಕೆ ಅದೂ ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಚಿತ್ರ ವಜ್ರಕಾಯ. ಈ ಚಿತ್ರದಲ್ಲಿ  ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ನಟ ಧನುಷ್ ಅವರು ಹಾಡುತ್ತಿದ್ದಾರೆ ಎಂದು ಹೇಳಿದ್ದೆವು,ಅವರು  ಹರ್ಷ ನಿರ್ದೇಶನದ ಚಿತ್ರದಲ್ಲಿ ಹಾಡಿದ್ದು ಆಯ್ತು. ಈ ತಮಿಳು ಸ್ಟಾರ್ ನಟನ ಹಾಡಿಗೆ ಸಂಭಾವನೆ ನೀಡಿದ್ದು 4 ಲಕ್ಷ ಬೆಲೆ ಬಾಳುವ ರಿಸ್ಟ್ ವಾಚ್. ಇದು ಕನ್ನಡದಲ್ಲಿ ಅವರು ಹಾಡಿದ ಮೊದಲ ಹಾಡಾಗಿದ್ದು, ಈ ಮೂಲಕ ಕನ್ನಡ ಚಿತ್ರಗಳಲ್ಲಿ ಹಾಡುವ ಸಾಧ್ಯತೆ ಹೇರಳವಾಗಿದೆ.  
 
ಈ ಚಿತ್ರದ ನಿರ್ಮಾಪಕರಾಗಿರುವ ಸಿ ಆರ್ ಮನೋಹರ್ ಅವರಿಗೆ ಧನುಷ್ ಗೆ ಎಷ್ಟು ಸಂಭಾವನೆ ಕೊಡ ಬೇಕು ಹಾಗೂ ಹೇಗೆ ಅವರ ಸರ್ವೀಸ್ ಗೆ ಕಾಣಿಕೆ ನೀಡ ಬೇಕು ಎಂದು ತಿಳಿಯದೆ ಅಂತಿಮವಾಗಿ ರಿಸ್ಟ್ ವಾಚ್ ನೀಡುವುದರ ಮೂಲಕ ಈ ಹಾಡಿನ ಸಂಭಾವನೆ ಚುಕ್ತಾ ಮಾಡಿದ್ದಾರೆ. 
 
ನಿರ್ದೇಶಕ ಹರ್ಷ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಹಾಡಲೆಂದು ಕೇಳಿದಾಗ ಡಾ. ರಾಜ್ ಕುಮಾರ್ ಅವರ ಕುಟುಂಬ ಬಗ್ಗೆ ತುಂಬಾ ಗೌರವ ಇರುವ ಧನುಷ್ ಶಿವಣ್ಣ ಚಿತ್ರದಲ್ಲಿ ಹಾಡಲು ಸಮ್ಮತಿಸಿದರಂತೆ. ಈಗ ಧನುಷ್ ಮತ್ತು ಡಾ. ಶಿವರಾಜ್ ಕುಮಾರ್  ಉತ್ತಮ ಸ್ನೇಹಿತರಾಗಿದ್ದಾರೆ. 
 
ನೋ ಪ್ರಾಬ್ಲಂ ನೋ ಪ್ರಾಬ್ಲಂ ಎನ್ನುವುದು ಹಾಡಿನ ಮೊದಲ ಸಾಲು.ಇದನ್ನು ಮೋಹನ್ ರಚಿಸಿದ್ದಾರೆ. ಈ ಹಾಡನ್ನು  ಚೆನ್ನೈನ ಧನುಷ್  ಮನೆಯಲ್ಲಿ ಇರುವ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ. ಕೊಲವೆರಿ ಡಿ ಯಂತೆ ಈ ಹಾಡು ಧನುಷ್ ಹವಾವನ್ನು ಕನ್ನಡದಲ್ಲಿ ಸೃಷ್ಟಿ ಮಾಡುತ್ತದೆಯೇ ? ಸಮಯ ಈ ಪ್ರಶ್ನೆಗೆ ಉತ್ತರಿಸುತ್ತದೆ!  
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments