Select Your Language

Notifications

webdunia
webdunia
webdunia
webdunia

ಸಿನಿಮಾ ಪ್ರಚಾರಕ್ಕೆಂದು ನಾನು ಎಷ್ಟು ಕಷ್ಟ ಬೇಕಾದರೂ ಪಡ್ತೀನಿ..!

ಸಿನಿಮಾ ಪ್ರಚಾರಕ್ಕೆಂದು  ನಾನು ಎಷ್ಟು ಕಷ್ಟ ಬೇಕಾದರೂ  ಪಡ್ತೀನಿ..!
, ಶುಕ್ರವಾರ, 17 ಅಕ್ಟೋಬರ್ 2014 (12:09 IST)
ಸಿನಿಮಾಗಳಲ್ಲಿ ನಟಿಸಿದ ಬಳಿಕ ತಮ್ಮ ಹೊಣೆ ಮುಗಿದು ಹೋಯ್ತು ಎಂದು ಅನೇಕರು ನಂಬುತ್ತಾರೆ. ಅದಾದ ಬಳಿಕ ಪ್ರಚಾರದ ಕೆಲ್ಸಕ್ಕೆ ಆದ್ಯತೆ ನೀಡುವ ಅಗತ್ಯ ಇಲ್ಲವೆಂದು ಸಹಿತ ತಿಳಿಯುತ್ತಾರೆ ಅನೇಕ ಕಲಾವಿದರು.ಆದರೆ ಕೆಲವರು ಮಾತ್ರ ಈ ವಿಷಯದಲ್ಲಿ ತುಂಬಾ ಭಿನ್ನ. 
 
ತಾವು ನಟಿಸುವುದಕ್ಕೆ ಮಾತ್ರವಲ್ಲ ಪ್ರಚಾರದ ಕೆಲಸಗಳಲ್ಲೂ ಸಹಿತ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಂತಹ ಭಿನ್ನವಾದ ವ್ಯಕ್ತಿತ್ವ ಹೊಂದಿರುವವರಲ್ಲಿ ಪ್ರಿಯಾಂಕ ಚೋಪ್ರ ಸಹ ಒಬ್ಬರು. 
 
ಒಂದು ಸಿನಿಮಾ ಜನರ ಬಳಿ ಬರಬೇಕಾದರೆ ಪ್ರಚಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎನ್ನುವ ಪ್ರಿಯಾಂಕ, ನೀವು ಎಷ್ಟೇ ಉತ್ತಮ ಚಿತ್ರ ನಿರ್ಮಿಸಿ ಆದರೆ ಅದನ್ನು ಜನರ ಗಮನಕ್ಕೆ ತರದೇ ಇದ್ದಾರೆ ಪ್ರಯೋಜನವಿಲ್ಲ. ಪಬ್ಲಿಸಿಟಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನಾನೆಂದಿಗೂ ತಿಳಿಯುವುದಿಲ್ಲ. ಏಕೆಂದರೆ ಮೊದಲ ಸನ್ನಿವೇಶದ ಕ್ಲಾಪ್ ಮಾಡಿದಾಗಿನಿಂದ ಹಿಡಿದು, ಸಿನಿಮಾ ಪ್ರಚಾರದವರೆಗೂ ನನ್ನದೇ ಹೊಣೆ ಎಂದು ಭಾವಿಸುತ್ತೇನೆ.ಆದ್ದರಿಂದ ನಾನು ಏಸಿ ಹಾಲ್ ನಲ್ಲಿ ಕುಳಿತು ಪ್ರಚಾರ ಮಾಡುವುದಕ್ಕೆ ಮಾತ್ರವಲ್ಲ ಬಿರು ಬಿಸಿಲಿನಲ್ಲಿ ನಡೆದು ಬೇಕಾದರೂ ಪ್ರಚಾರ ಮಾಡಲು ಸಿದ್ಧ ಎಂದು ಹೇಳಿದ್ದಾಳೆ. 
 
ತನ್ನ ಚಿತ್ರಕ್ಕೆ ಎಷ್ಟು ಸಂಭಾವನೆ, ಇದಕ್ಕಿಂತ ಬೇರೆ ಚಿತ್ರದಲ್ಲಿ ಇನ್ನು ಹೆಚ್ಚು ಸಂಭಾವನೆ ಸಿಗುತ್ತದೆ ಅಂದ್ರೆ ಅಲ್ಲಿಗೆ ಹಾರಿ ಹೋಗುವ, ಚಿತ್ರಕ್ಕೆ ಸಂಬಂಧಪಟ್ಟಂತೆ ಎಲ್ಲ ವಿಷಯದಲ್ಲೂ ಸಹಿತ ಅಡ್ಡಿ ಉಂಟು ಮಾಡುವ ಮಂದಿಯ ನಡುವೆ ಪಿಗ್ಗಿ ಚಾಪ್ಸ್ ಮಾದರಿಯಾಗಿ ನಿಲ್ಲುತ್ತಾಳೆ. 
 

Share this Story:

Follow Webdunia kannada