Select Your Language

Notifications

webdunia
webdunia
webdunia
webdunia

ಪ್ರಣಯ ಜೋಡಿ ಕತ್ರೀನಾ-ರಣಬೀರ್ ಪ್ರೇಮದಲ್ಲಿ ಬಿರುಕು...?!

ಪ್ರಣಯ ಜೋಡಿ ಕತ್ರೀನಾ-ರಣಬೀರ್ ಪ್ರೇಮದಲ್ಲಿ ಬಿರುಕು...?!
, ಶನಿವಾರ, 28 ಫೆಬ್ರವರಿ 2015 (10:23 IST)
ಬಾಲಿವುಡ್ ಹಾಟ್‌ ಪೇರ್ ಎನ್ನುವ ಹೆಗ್ಗಳಿಕೆ ಪಡೆದ ಕಲಾವಿದರು ಕರ್ತಿನಾ ಕೈಫ್ ಮತ್ತು ರಣಬೀರ್ ಕಪೂರ್. ಈ ಜೋಡಿ ಬಗ್ಗೆ ಹೇಳುವುದಾದರೆ, ಇವರಿಬ್ಬರು ತಮ್ಮ ಪ್ರೀತಿ, ಪ್ರಣಯ ಅದೂ ಇದು ಅಲ್ಲದ ಡೇಟಿಂಗ್ ಪಾಟಿಂಗ್ ಹೀಗೆ ಹತ್ತು ಹಲವಾರು ರೀತಿಗಳಿಂದ ಜನರ ಗಮನ ಹಾಗೂ ಮಾಧ್ಯಮಗಳ ಕಣ್ಣಿಗೆ ಬೀಳುತ್ತಲೇ ಇದ್ದಾರೆ. ಈಗ ಬಂದಿರುವ ಸುದ್ದಿಯೊಂದರ ಪ್ರಕಾರ ಈ ಜೋಡಿ ನಡುವೆ ಸಣ್ಣ ಪ್ರಮಾಣದ ಬಿರುಕು ಬಿಟ್ಟಿದೆಯಂತೆ. ಹಾಗಂತ ಸುದ್ದಿ ಇದೆ. ಇದರ ಬಗ್ಗೆ ಅವಲೋಕನ ಮಾಡಿದಾಗ ಕಂಡು ಬಂದ ಸಂಗತಿ ಹೀಗಿದೆ. ಆದರೆ ಇದೆಷ್ಟರಮಟ್ಟಿಗೆ ಸತ್ಯ ಎನ್ನುವುದು ನಮಗೆ ತಿಳಿದಿಲ್ಲ.
ಒಂದು ವೆಬ್‌ಸೈಟ್ ಹರಡಿರುವ ಸುದ್ದಿ ಅನ್ವಯ ಈ ಜೋಡಿ ನಡುವೆ ಮನಸ್ತಾಪ ಉಂಟಾಗಿದೆ. ಇವರು ಒಬ್ಬರಮೇಲೊಬ್ಬರು ಕೋಪ ಮಾಡಿಕೊಳ್ಳಲು ಮುಖ್ಯ ಕಾರಣ ಕತ್ರಿನಾ ಕೈಫ್ ನಿನ್ನೆ ಮೊನ್ನೆವರೆಗೂ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದ ಸುಭಾಷ್ ಸಿಂಗ್. ಒಂದು ಚಿತ್ರದ ಶೂಟಿಂಗ್ ಆತ ಸೆಟ್‌ಗೆ ತಡವಾಗಿ ಬಂದನಂತೆ. ಇದರಿಂದ ಕೋಪಗೊಂಡ ಕತ್ರಿನಾ ಕೈಫ್ ಆತನನ್ನು ಹಿಗ್ಗಾಮುಗ್ಗ ಜಾಡಿಸಿದ್ದಾಳೆ. ಇದರಿಂದ ನೊಂದ ಆತ ಆಕೆ ಸಂಗಡ ನನಗೆ ಸರಿ ಹೊಂದದು ಎಂದು ಬಿಟ್ಟು ಬಿಟ್ಟಿದ್ದಾನೆ.  
 
ಅದು ಹಳೆಯ ಕಥೆ. ಆದರೆ ಅದಾದ ಸ್ವಲ್ಪ ಕಾಲದಲ್ಲಿ ಆತ ಪ್ರೊಡ್ಯೂಸರ್ ಆದ. ಆತನ ಚಿತ್ರವನ್ನು ಜಯಂತ್ ಗಿಲೀತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಲು ರಣಬೀರ್ ಕಪೂರ್‌ಗೆ ಆಹ್ವಾನ ನೀಡಿದ್ದಾರೆ ಸುಭಾಷ್. ಆತನ ಮಾತಿಗೆ ಸಮ್ಮತಿಸಿ ರಣಬೀರ್ ನಟಿಸಲು ಒಪ್ಪಿದ್ದಾರಂತೆ. ಇದರಿಂದ ಕತ್ರಿನಾ ಕೋಪ ಹೆಚ್ಚಾಗಿ ಈಗ ಅದು ಆಕೆಯ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಿದೆ ಎನ್ನುವುದೇ ಸಧ್ಯದ ಸುದ್ದಿ ಎಂದಿದ್ದಾರೆ ಬಾಲಿವುಡ್ ಮಂದಿ! 

Share this Story:

Follow Webdunia kannada