Webdunia - Bharat's app for daily news and videos

Install App

ಇಂದಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ನೋಡಲು ಬರಲಿದೆ ಸಿನಿ ಸ್ನೇಹಿತರ ದಂಡು

Krishnaveni K
ಬುಧವಾರ, 18 ಸೆಪ್ಟಂಬರ್ 2024 (08:45 IST)
ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ನೋಡಲು ಇಂದಿನಿಂದ ಮತ್ತೆ ಸಿನಿ ಸ್ನೇಹಿತರ ದಂಡು ಆಗಮಿಸುವ ಸಾಧ್ಯತೆಯಿದೆ. ಇದಕ್ಕೆ ಕಾರಣವೂ ಇದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರನ್ನು ನೋಡಲು ನಿತ್ಯ ಸಿನಿ ಸ್ನೇಹಿತರು ಬರುತ್ತಲೇ ಇದ್ದರು. ಆದರೆ ಅಲ್ಲಿ ರಾಜಾತಿಥ್ಯ ಪಡೆದ ಫೋಟೋ ವೈರಲ್ ಆದ ಬೆನ್ನಲ್ಲೇ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಇಲ್ಲಿ ದರ್ಶನ್ ಗೆ ಕಠಿಣ ನಿಯಮಗಳನ್ನು ಹೇರಲಾಯಿತು.

ಅದರಂತೆ ಕೇವಲ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಯಿತು. ಸ್ನೇಹಿತರು, ಹಿತೈಷಿಗಳಿಗೆ ಭೇಟಿಗೆ ಅವಕಾಶವಿಲ್ಲ ಎಂದು ಡಿಐಜಿ ಖಡಕ್ ಸೂಚನೆ ಕೊಟ್ಟರು. ಅದರಂತೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಬಿಟ್ಟರೆ ಉಳಿದವರು ಯಾರೂ ಇದುವರೆಗೆ ದರ್ಶನ್ ಭೇಟಿಗೆ ಬಂದಿರಲಿಲ್ಲ.

ಆದರೆ ನಿನ್ನೆ ನ್ಯಾಯಾಧೀಶರ ಮುಂದೆ ಹಾಜರಾದಾಗ ದರ್ಶನ್ ಪರ ವಕೀಲರು ಸ್ನೇಹಿತರ ಭೇಟಿಗೆ ಅವಕಾಶ ಕೇಳಿದರು. ಅದಕ್ಕೆ ನ್ಯಾಯಾಧೀಶರೂ ಒಪ್ಪಿಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ನಟ ಧನ್ವೀರ್ ಜೈಲಿಗೆ ಬಂದಿದ್ದರು. ಇಂದಿನಿಂದ ಮತ್ತೆ ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರು ಜೈಲಿಗೆ ನಿಯಮಿತವಾಗಿ ಭೇಟಿ ನೀಡುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments