Select Your Language

Notifications

webdunia
webdunia
webdunia
webdunia

ರಿಕ್ಕಿ ಟ್ರೇಲರ್ ಗೆ ಅಭಿಮಾನಿಗಳು ಫಿದಾ...

ರಿಕ್ಕಿ ಟ್ರೇಲರ್ ಗೆ ಅಭಿಮಾನಿಗಳು ಫಿದಾ...
, ಶನಿವಾರ, 3 ಅಕ್ಟೋಬರ್ 2015 (11:08 IST)
ಉಳಿದವರು ಕಂಡಂತೆ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ರಿಕ್ಕಿ. ಮೊನ್ನೆಯಷ್ಟೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾದ ಟ್ರೇಲರ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ಮೊನ್ನೆ ಸಿನಿಮಾದ ಟ್ರೇಲರ್ ಅನ್ನು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು. ಸಿನಾಮದ ಟ್ರೇಲರ್ ನಲ್ಲಿರುವ ಸುದೀಪ್ ಧ್ವನಿಗೆ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದು, ಟ್ರೇಲರ್ ಈಗಾಗಲೇ ಎಲ್ಲರ ಮೆಚ್ಚಗೆ ಪಾತ್ರವಾಗಿದೆ. ಕರಾವಳಿಯ ಕಥಾಹಂದರವಿರುವ ಈ ಸಿನಿಮಾದಲ್ಲಿ ನಕ್ಸಲ್ ಚಟುವಟಿಕೆಯ ಬಗ್ಗೆಯೂ ಹೇಳಲಾಗುತ್ತಿದೆಯಂತೆ.
 
ಸಿನಿಮಾವನ್ನು ರಕ್ಷಿತ್ ಶೆಟ್ಟಿ ಆಪ್ತ ಮಿತ್ರ ರಿಷಭ್ ಶೆಟ್ಟಿ ನಿರ್ದೇಶಿಸಿದ್ದಾರೆ. ರಿಕ್ಕಿಗೆ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಈಗಗಾಲೇ ರಕ್ಷಿತ್ ಅವರ ಙಳಿದವರು ಕಂಡಂತೆ, ಸಿಂಪಲ್ಲಾಂಗೊಂದು ಲವ್ ಸ್ಟೋರಿ, ವಾಸ್ತುಪ್ರಕಾರ ಸಿನಿಮಾಗಳನ್ನು ನೋಡಿದ ಅಭಿಮಾನಿಗಳಿಗೆ ರಿಕ್ಕಿ ಸಿನಿಮಾದ ಬಗ್ಗೆಯೂ ಸಾಕಷ್ಟು ಕುತೂಹಲಗಳಿವೆ.

Share this Story:

Follow Webdunia kannada