Webdunia - Bharat's app for daily news and videos

Install App

ಯಶ್-ರಾಧಿಕಾ ಮದುವೆಯನ್ನು ಅಭಿಮಾನಿಗಳೂ ಕಣ್ತುಂಬಿಕೊಳ್ಳಬಹುದು!

Webdunia
ಬುಧವಾರ, 23 ನವೆಂಬರ್ 2016 (09:00 IST)
ಬೆಂಗಳೂರು: ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಯಶ್ ಮತ್ತು ರಾಧಿಕಾಗೆ ಅಭಿಮಾನಿಗಳೆಂದರೆ ವಿಪರೀತ ಪ್ರೀತಿ. ಹೀಗಾಗಿ ಅಭಿಮಾನಿಗಳು ಖುದ್ದಾಗಿ ಯಶ್ ರಾಧಿಕಾ ಮದುವೆಗೆ ಬಂದು ಶುಭ ಹಾರೈಸಲು ಅವಕಾಶವಿದೆಯಂತೆ.

ಡಿಸೆಂಬರ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಈ ರಿಯಲ್ ಲೈಫ್ ಜೋಡಿಯ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲಿ ಒಂದು ದಿನ ಕುಟುಂಬದವರು ಮತ್ತು ಆಪ್ತೇಷ್ಟರಿಗೆ ಇನ್ನೊಂದು ದಿನ ಅಭಿಮಾನಿಗಳಿಗೆ ಮೀಸಲಿಡಲಾಗಿದೆ.

ಡಿಸೆಂಬರ್ 9 ರಂದು ಈ ತಾರಾ ಜೋಡಿ ಹಸೆಮಣೆ ಏರಲಿದೆ. ಅಂದು ಕುಟುಂಬದವರು ಮತ್ತು ಸಿನಿಮಾ ಮಂದಿಗೆ ಮಾತ್ರ ಪ್ರವೇಶ. ಉಳಿದ ಎರಡು ದಿನ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅದರಲ್ಲೂ ಡಿಸೆಂಬರ್ 11 ರಂದು ಕೇವಲ ಅಭಿಮಾನಿಗಳಿಗಾಗಿ.

ಈ ಎಲ್ಲಾ ಕಾರ್ಯಕ್ರಮಗಳು ನಡೆಯುವುದು ಬೆಂಗಳೂರಿನ ಅರಮನೆ ಮೈದಾನದಲ್ಲಿ. ವಿವಾಹಕ್ಕೆ ಬಂದವರು ಉತ್ತರ ಮತ್ತು ದಕ್ಷಿಣ ಭಾರತೀಯ ಶೈಲಿಯ ಭರ್ಜರಿ ಊಟ ಮಾಡಿ ತೆರಳಬಹುದು. ಈಗಾಗಲೇ ಮದುವೆಗಾಗಿ ಚಿತ್ರ ರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಯಶ್ ತಮ್ಮ ಪ್ರೀತಿಯ ರಾಧಿಕೆಗೆ ಒಡವೆ ವಸ್ತ್ರ ಖರೀದಿ ಮಾಡುವಲ್ಲಿ ಬ್ಯುಸಿಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments