Select Your Language

Notifications

webdunia
webdunia
webdunia
webdunia

ಕತ್ರೀನಾ ಜೊತೆ ಅಭಿನಯಿಸೋದಕ್ಕೆ ಕಾತರನಾಗಿದ್ದೇನೆ ಸಿದ್ಧಾರ್ಥ್ ಮಲ್ಹೋತ್ರಾ

ಕತ್ರೀನಾ ಜೊತೆ ಅಭಿನಯಿಸೋದಕ್ಕೆ ಕಾತರನಾಗಿದ್ದೇನೆ ಸಿದ್ಧಾರ್ಥ್ ಮಲ್ಹೋತ್ರಾ
, ಶನಿವಾರ, 29 ಆಗಸ್ಟ್ 2015 (10:23 IST)
ಸದ್ಯ ಬರ್ದರ್ಸ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಸಿದ್ಧಾರ್ಥ್ ಸಂಭ್ರಮ ಈಗ ಮತ್ತಷ್ಟು ಹೆಚ್ಚಿದೆ. ಅದಕ್ಕೆ ಕಾರಣ ತಮ್ಮ ದಿನ ಸಿನಿಮಾದಲ್ಲಿ ಕತ್ರೀನಾ ಜೊತೆ ನಟಿಸುತ್ತಿರುವುದು. ಕತ್ರೀನಾ ಜೊತೆ ನಟಿಸುತ್ತಿರುವುದು ಸಿದ್ಧಾರ್ಥ್ ಮಲ್ಹೋತ್ರಾಗೆ ತುಂಬಾನೇ ಖುಷಿ ನೀಡಿದೆಯಂತೆ.

ಸಿದ್ಧಾರ್ಥ್ ಕತ್ರೀನಾ ಜೊತೆ ಕಲ್ ಜಿಸ್ನೆ ದೇಖಾ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.  ಸಿನಿಮಾದಲ್ಲಿ ಕಾತರ ಜೊತೆ ಯಾವಾಗ ನಟಿಸುತ್ತೇನೋ ಅಂತಾ ಸಿದ್ಧಾರ್ಥ್ ಕಾತುರದಿಂದ ಕಾಯುತ್ತಿದ್ದಾರಂತೆ. ಈಗಾಗಲೇ ಸಿದ್ಧಾರ್ಥ್ ಅವರ ಬ್ರದರ್ಸ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಸಿನಿಮಾದ ಬಗ್ಗೆಯೂ ಸಿದ್ದಾರ್ಥ್ ತುಂಬಾನೇ ಎಕ್ಸೈಟ್ ಆಗಿದ್ದಾರಂತೆ. ಅದಕ್ಕಿಂತಲೂ ಹೆಚ್ಚಾಗಿ ಸಿನಿಮಾದ ಶೂಟಿಂಗ್ ಯಾವಾಗ ಆರಂಭವಾಗುತ್ತೆ ಅಂತಾ ಸಿದ್ಧಾರ್ಥ್ ಕಾಯುತ್ತಿದ್ದಾರಂತೆ.
 
ಸಪ್ಟಂಬರ್ 1 ರಿಂದ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಈಗಾಗಲೇ ಸಿನಿಮಾದ ಸ್ಕ್ರಿಫ್ಟ್ ಕ್ಯಾಟ್ ಹಾಗೂ ಸಿದ್ಧಾರ್ಥ್ ಇಬ್ಬರಿಗೂ ತುಂಬಾನೇ ಇಷ್ಟವಾಗಿದೆಯಂತೆ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸಿದ್ಧಾರ್ಥ್, ಕತ್ರೀನಾ ಜೊತೆ ನಟಿಸುತ್ತಿದ್ದಾರೆ. ಸಿನಿಮಾವನ್ನು ನಿತ್ಯಾ ಮೆಹ್ರಾ ನಿರ್ದೇಶಿಸುತ್ತಿದ್ದು, ಫರ್ಹಾನ್ ಅಖ್ತರ್ ಹಾಗೂ ರಿತೀಶ್ ಅಡ್ವಾಣಿ ನಿರ್ಮಿಸುತ್ತಿದ್ದಾರೆ. 

Share this Story:

Follow Webdunia kannada