Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ಅಭಿನಯದ ಮುಂದಿನ ಚಿತ್ರ ಮುರುಗ

ದುನಿಯಾ ವಿಜಯ್ ಅಭಿನಯದ ಮುಂದಿನ ಚಿತ್ರ ಮುರುಗ
, ಮಂಗಳವಾರ, 19 ಮೇ 2015 (10:19 IST)
ನಟ ದುನಿಯಾ ವಿಜಯ್ ಅವರು ಈಗ ಯಾವ್ಯಾವ  ಚಿತ್ರಗಳಿಗೆ ಸಹಿ ಹಾಕಿದ್ದಾರೆ  ಯಾವುದು ಎನ್ನುವ ಕುತೂಹಲ ಅವರ ಅಭಿಮಾನಿಗಳು ಹೊಂದಿದ್ದಾರೆ. ಈಗ ಬಂದಿರುವ ಸುದ್ದಿ ಅನ್ವಯ ವಿಜಯ್ ಅವರು ಮುರುಗ ಎನ್ನುವ ಶೀರ್ಷಿಕೆ ಹೊಂದಿರುವ ಚಿತ್ರಕ್ಕೆ ಸಹಿ ಹಾಕಿದ್ದಾರೆ. 
ಈ ಚಿತ್ರ ಸಂಪೂರ್ಣವಾಗಿ ಮನೋರಂಜನೆಯ ಅಂಶಗಳನ್ನು ಒಳಗೊಂಡಿಲ್ಲ. ಇದು ಕಮರ್ಷಿಯಲ್ ಅಂಶಗಳ ಜೊತೆಗೆ  ಆಕ್ಷನ್ ಅಂಶಗಳನ್ನು ಸಹಿತ ಹೊಂದಿದೆ ಎನ್ನುವುದು ತಿಳಿದು ಬಂದಿದೆ. ಅದನ್ನು ಪಿ ಎನ್ ಸತ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸತ್ಯ ಆಕ್ಷನ್ ಡೈರೆಕ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದರೂ ಸಹಿತ ಆ ಬಳಿಕ ನಿರ್ದೇಶನದ ಕಡೆಗೆ ತಮ್ಮ ಗಾನ ನೀಡಿದರು. ಅದರ ಅನ್ವಯ ಅವರು ಈಗಾಗಲೇ ಶಿವಾಜಿನಗರ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ  ವಿಜಯ್ ಹೀರೋ ಆಗಿದ್ದರು. ಈಗ ಮತ್ತೆ ವಿಜಯ್ ಮತ್ತು ಸತ್ಯ  ಮುರುಗ ಚಿತ್ರದ ಮೂಲಕ ಒಂದಾಗಿದ್ದಾರೆ. ಜಾಕ್ಸನ್ ಚಿತ್ರವನ್ನು ನಿರ್ಮಾಣ ಮಾಡಿದ್ದ ಸುಂದರ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.ಈಗ ತಾರಾಗಣದ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಸಲಾಗುತ್ತಿದೆ. ಈ ಚಿತ್ರ ವಿಜಯ್  ಹಾಗೂ ಯೋಗರಾಜ್ ಭಟ್ ಅವರ ಚಿತ್ರದ ಕೆಲಸ ಪೂರ್ಣಗೊಂಡ  ಬಳಿಕ ಆರಂಭವಾಗುತ್ತದೆಯಂತೆ.
 

Share this Story:

Follow Webdunia kannada