Webdunia - Bharat's app for daily news and videos

Install App

ಡಾ. ರಾಜ್‌ಕುಮಾರ್ ಸುಪ್ರಭಾತ

Webdunia
ಶುಕ್ರವಾರ, 6 ಮಾರ್ಚ್ 2015 (10:25 IST)
ಡಾ ರಾಜ್ ಕುಮಾರ್ ಸುಪ್ರಭಾತ ಇನ್ನು ಮುಂದೆ ಅವರ ಅಭಿಮಾನಿಗಳ ಮನೆಗಳಲ್ಲಿ ಗುಣಗುಣಿಸುತ್ತದೆ. ಆದರೆ ವಿಷಯ ಅದಲ್ಲ, ಕನ್ನಡದ ಮೇರುನಟ ಹಾಗೂ ವಿಶ್ವದ ಯಾವುದೇ ಒಬ್ಬ ನಟನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಟ ಡಾ.ರಾಜ್ ಅವರ ಸುಪ್ರಭಾತ  ಎಂದಿಗೂ ಎಂದೆಂದಿಗೂ ಶಾಶ್ವತವಾಗಿ ಉಳಿಯುತ್ತದೆ. 
ಇತ್ತೀಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸದ ಅಭೂತಪೂರ್ವ ಯಶಸ್ಸು ಅವರನ್ನು ಜನರೆಷ್ಟು ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿಸುತ್ತದೆ. ಡಾ. ರಾಜ್ ನಮ್ಮನಗಲಿ 9 ವರ್ಷ ಕಳೆದರೂ ಅವರ ನೆನೆಪು ಚಿರಂತನ. ಇದೇ ಏಪ್ರಿಲ್ 12ರಂದು 9ನೇ ವರ್ಷದ ಪುಣ್ಯತಿಥಿಯಂದು ಡಾ. ರಾಜ್ ಅವರ ಗುಣಗಾನ ಹೊಂದಿರುವ ಸುಪ್ರಭಾತವೊಂದು ಸಿ.ಡಿ. ಮೂಲಕ ಬಿಡುಗಡೆಯಾಗಲಿದೆ. ಭಾರತೀಯ ಚಿತ್ರರಂಗದ ಯಾವೊಬ್ಬ ನಟ-ನಟಿಗೆ ಇದುವರೆವಿಗೂ ಯಾರೊಬ್ಬರೂ ಸುಪ್ರಭಾತವನ್ನು ಬಿಡುಗಡೆ ಮಾಡಿಲ್ಲ. ಈ ಗೌರವ ಮೇರುನಟರಿಗೆ ಸಲ್ಲಲಿದೆ. 
 
ಈ ಸುಪ್ರಭಾತ ಆಡಿಯೋವನ್ನು ಪ್ರಜಾಪ್ರಭುತ್ವ, ಗಂಗವ್ವ ಗಂಗಾಮಾಯಿ, ಸಿಡಿದೆದ್ದ ಗಂಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಮು.ರಮೇಶ್ ಸಿದ್ದಪಡಿಸಿದ್ದಾರೆ. 27 ನಿಮಿಷದ ಈ ಸುಪ್ರಭಾತವು 18ನುಡಿಗಳನ್ನು ಹೊಂದಿದ್ದು, 18 ವಿವಿಧ ರಾಗಗಳಲ್ಲಿ ಮೂಡಿ ಬರಲಿದೆ. ಅಜಯ್ ವಾರಿಯರ್ ಇದನ್ನು ಹಾಡಿದ್ದು, ಎಲ್.ಎನ್.ಗೂಚಿ ಸಂಗೀತ ನೀಡಿದ್ದಾರೆ. ಎಪ್ರಿಲ್ 12 ಮಾರುಕಟ್ಟೆಯಲ್ಲಿ ದೊರಕಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments