Select Your Language

Notifications

webdunia
webdunia
webdunia
webdunia

ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ದೂದ್ ಪೇಡಾ

ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ದೂದ್ ಪೇಡಾ
, ಶುಕ್ರವಾರ, 3 ಜುಲೈ 2015 (10:07 IST)
ದಿಗಂತ್, ಗುಳಿ ಕೆನ್ನೆಯ ಈ ದೂದ್ ಪೇಡಾ ಅದೆಷ್ಟೋ ಹುಡುಗಿಯರ ಹಾಟ್ ಫೇವರೇಟ್. ಅದೇ ಸ್ಮಾರ್ಟ್ ಬಾಯ್ ದಿಗಂತ್ ಇದೀಗ ಡಿಫರೆಂಟ್ ಲುಕ್ ನಲ್ಲಿ  ತಮ್ಮ ಅಭಿಮಾನಿಗಳ ಎದುರು ಪ್ರತ್ಯಕ್ಷವಾಗಲಿದ್ದಾರೆ. ಇದೇ ಮೊದಲ ಬಾರಿಗೆ ದಿಗಂತ್ ರಗಡ್ ಲು ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಗೌಸ್ ಪೀರ್ ಅವರ ಚೊಚ್ಚಲ ಸಿನಿಮಾ ಶಾರ್ಪ್ ಶೂಟರ್ ನಲ್ಲಿ ದಿಗಂತ್ ಮೊದಲ ಬಾರಿಗೆ ತಮ್ಮ ಸಿಕ್ಸ್ ಪ್ಯಾಕ್ ಬಾಡಿ ಪ್ರದರ್ಶಿಸುತ್ತಿದ್ದಾರೆ. ಇನ್ನೊಂದು ವಿಶೇಷ ಅಂದರೆ ದಿಗಂತ್ ಈ ಸಿನಿಮಾದಲ್ಲಿ ಸಿಂಗರ್ ಕೂಡ ಆಗಿದ್ದಾರೆ. ಹಾಸ್ಯನಟ ಚಿಕ್ಕಣ್ಣ ಬರೆದಿರುವ ಹಾಡಿಗೆ ದಿಗಂತ್ ದನಿಯಾಗಿದ್ದಾರೆ. ಇನ್ನು ದಿಗ್ಗಿಗೆ ಚಿಕ್ಕಣ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಕ್ಯಾಚಿಯಾಗಿರುವ ಹಾಡನ್ನು ಇಬ್ಬರೂ ಚೆನ್ನಾಗಿಯೇ ಹಾಡಿದ್ದಾರಂತೆ.ಇನ್ನು ಸಿನಿಮಾದ ಹಾಡುಗಳನ್ನು ಬ್ಯಾಂಕಾಕ್ ನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ನವನಟಿ ಸಂಗೀತಾ ದಿಗಂತ್ ಜೊತೆ ಹೆಜ್ಜೆ ಹಾಕಿದ್ದಾಳೆ. ಇನ್ನು ಈ ರೋಮ್ಯಾಂಟಿಕ್ ಹಾಡುಗಳನ್ನು ಬರೆದಿರೋದು ಸಿನಿಮಾದ ನಿರ್ದೇಶಕ ಗೌಸ್ ಪೀರ್. 
 
ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ದಿಗಂತ್ ಮನದನ್ನೆ ಐಂದ್ರಿತಾ ರೇ ಕೂಡ ಹಾಡೊಂದಕ್ಕೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಹಾಡಿನಲ್ಲಿ ದಿಗಂತ್ ಗೆ ಚಿಕ್ಕಣ್ಣ ಕೂಡ ಸಾಥ್ ಕೊಟ್ಟಿದ್ದಾರೆ.ಇನ್ನು ಕೊರಿಯಾ ಗ್ರಾಫರ್ ಮುರಳಿ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಆಲ್ ಮೋಸ್ಟ್ ಚಿತ್ರೀಕರಣ ಮುಗಿದಿದ್ದು, ಎಲ್ಲಾ ಅಂದುಕೊಂಡಂತೆ ಆದ್ರೆ ಸಿನಿಮಾ ಆಗಸ್ಟ್ ತಿಂಗಳಲ್ಲಿ ಥಿಯೇಟರ್ ಅಂಗಳಕ್ಕೆ ಅಪ್ಪಳಿಸಲಿದೆ.

Share this Story:

Follow Webdunia kannada