Select Your Language

Notifications

webdunia
webdunia
webdunia
webdunia

ಮಗಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ: ಅಭಿಷೇಕ್

ಮಗಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ: ಅಭಿಷೇಕ್
, ಶುಕ್ರವಾರ, 3 ಜುಲೈ 2015 (10:21 IST)
ಪ್ರತಿಯೊಬ್ಬರಿಗೂ ಅವರವರ ಮಕ್ಕಳ ಮೇಲೆ ವಿಶೇಷ ಪ್ರೀತಿ ಇರುತ್ತೆ. ತಮ್ಮ ಮಕ್ಕಳ ಬಗ್ಗೆ ಯಾರಾದ್ರೂ ಮಾತನಾಡಿದ್ರೆ ಅದನ್ನು ಅರಗಿಸಿಕೊಳ್ಳೋದು ಸಾಧ್ಯವಿಲ್ಲ. ಇದರಿಂದ ನಮ್ಮ ಛೋಟಾ ಬಿ ಕೂಡ ಹೊರತಾಗಿಲ್ಲ. ಹೌದು ತಮ್ಮ ಪುತ್ರಿ ಬಗ್ಗೆ ಮಾತನಾಡಿದವರ ವಿರುದ್ಧ ಅಭಿಷೇಕ್ ಬಚ್ಚನ್ ಫುಲ್ ಗರಂ ಆಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ ಇತ್ತೀಚೆಗೆ ಯುವಕನೊಬ್ಬ ಟ್ವಿಟರ್ ನಲ್ಲಿ ಅಭಿಷೇಕಗ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮುದ್ದಿನ ಮಗಳು ಆರಾಧ್ಯಳ ಬಗ್ಗೆ ಅತಿಯಾಗಿ ಮಾತನಾಡಿದ್ದ. ಆರಾಧ್ಯ ಬೆಳೆದು ದೊಡ್ಡವಳಾದ ಬಳಿಕ ಆಕೆ ದ್ರೋಣ ಹಾಗೂ ಝೂಮ್ ಬರಾಬರ್ ಝೂಮ್ ಸಿನಿಮಾವನ್ನು ಇಷ್ಟಪಡಲ್ಲ ಎಂದಿದ್ದ. ಇದು ಅಭಿಷೇಕ್ ಕಣ್ಣು ಕೆಂಪಾಗಿಸಿದೆ. ಅಭಿಮಾನಿಯೊಬ್ಬ ಮಾತನಾಡಿದ ವರಸೆ ಅಭಿಗೆ ಸಖತ್ ಕೋಪ ತರಿಸಿದೆ. ಅಲ್ಲದೇ ಅಭಿಮಾನಿಯ ಹೇಳಿಕೆಗೆ ಅಭಿಷೇಕ್ ಟ್ವಿಟರ್ ನಲ್ಲೇ ಟಾಂಗ್ ನೀಡಿದ್ದಾರೆ. ನಾನು ನನ್ನ ಪತ್ನಿ ಐಶ್ವರ್ಯಾ ರೈ, ಅಪ್ಪ ಅಮಿತಾಬ್ ಬಚ್ಚನ್ ಹಾಗೂ ತಾಯಿ ಜಯಾ ಬಚ್ಚನ್ ಸೆಲಿಬ್ರೆಟಿಗಳು. ನಮ್ಮ ಬಗ್ಗೆ ಜನ ಒಂದೊಂದು ರೀತಿ ಮಾತನಾಡುತ್ತಾರೆ. ಆದ್ರೆ ನನ್ನ ಮಗಳು ಹಾಗಲ್ಲ. ಆಕೆ ಇವುಗಳಿಂದಲೇ ಹೊರಗೆ ಇದ್ದಾಳೆ. ಅವಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. 
 
ಇನ್ನು ಅಭಿಷೇಕ್ ಖಡಕ್ ಉತ್ತರದಿಂದ ತತ್ತರಿಸಿ ಹೋದ ಅಭಿಮಾನಿ ಕೂಡಲೇ ತನ್ನ ಹೇಳಿಕೆಯನ್ನು ಟ್ವಿಟರ್ ನಲ್ಲಿ ಡಿಲೀಟ್ ಮಾಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಆತನಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿರಬೇಕು. ಹಾಗಾಗಿ ಕೂಡಲೇ ಆತ ತನ್ನ ಹೇಳಿಕೆಯನ್ನು ತೆಗೆದಿದ್ದಾನೆ ಎಂದಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರೆಟಿಗಳ ಬಗ್ಗೆ ಬಾಯಿಗೆ ಬಂದ ಹಾಗೇ ಮಾತನಾಡುವವರಿಗೆ ಅಭಿಷೇಕ್ ನೀಡಿದ ಟಾಂಗ್ ಸರಿಯಾಗಿ ತಟ್ಟಿರುವುದಂತೂ ಸುಳ್ಳಲ್ಲ.

Share this Story:

Follow Webdunia kannada