Select Your Language

Notifications

webdunia
webdunia
webdunia
webdunia

ಸರ್ ಎನ್ನಬೇಡಿ, ನಾವಿಬ್ಬರೂ ಒಂದೇ ವಯಸ್ಸಿನವರು: ತರುಣ್

ಸರ್ ಎನ್ನಬೇಡಿ, ನಾವಿಬ್ಬರೂ ಒಂದೇ ವಯಸ್ಸಿನವರು: ತರುಣ್
, ಬುಧವಾರ, 4 ಮಾರ್ಚ್ 2015 (09:55 IST)
ಗೋವಾ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಇಬ್ಬರು ಯುವತಾರೆಯ ನಡುವೆ ಸ್ವಲ್ಪ ಗಂಭೀರ ಎನ್ನಿಸುವಂತಹ ಒಂದು ಮಾತಿನ ಶೈಲಿ ಆರಂಭ ಆಯ್ತು. ಕೋಮಲ್ ಕುಮಾರ್, ತರುಣ್, ಮತ್ತು ಶ್ರೀಕಿ ಅಭಿನಯಿಸಿರುವ ಮಲ್ಟಿ ಸ್ಟಾರರ್ ಚಿತ್ರದ ಬಗ್ಗೆ ತಿಳಿಸಲು ಕರೆದಿದ್ದ ಮಾತುಕತೆಯ ಸಮಯದಲ್ಲಿ ನಟಿ ಸೋನು ಅವರು ಭಾಷಣವನ್ನು ಆರಂಭಿಸಿದ ರೀತಿಗೆ ತರುಣ್ ಅವರಲ್ಲಿ ಸಣ್ಣ ಮಟ್ಟದ ಸಿಟ್ಟು ಉಂಟಾಗಿದ್ದು ಅವರ ಮಾತಿನಿಂದ ಸ್ಪಷ್ಟವಾಗಿತ್ತು. 
ಬಹುತಾರಾಗಣದ ಗೋವಾ ಚಿತ್ರದಲ್ಲಿ ಸೋನು, ಶರ್ಮಿಳಾ ಮಾಂಡ್ರೆ ಮತ್ತು ರಾಚೆಲ್ ಅವರುಗಳು ಸಹಿತ ಈ ಹೀರೋಗಳ ಜೊತೆಯಾಗಿದ್ದಾರೆ. ಸೋನು ಮೈಕ್ ತೆಗೆದುಕೊಂಡು ತರುಣ್ ಸಾರ್ ಎನ್ನುತ್ತಾ ಮಾತಿನ ನಡುವೆ ಹೇಳಿದಾಗ ತರುಣ್ ಪ್ರತಿಕ್ರಿಯೆ ತೋರಲಿಲ್ಲ. ಆ ಬಳಿಕ ಅವರು ನಾನು ಮತ್ತು ನೀವು ಹೆಚ್ಚು ಕಡಿಮೆ ಒಂದೇ ವಯೋಮಿತಿ ಹೊಂದಿದ್ದೇವೆ. 
 
ಆದ್ದರಿಂದ ದಯಮಾಡಿ ನನ್ನನ್ನು ಸರ್ ಎಂದು ಕರಿಯ ಬೇಡಿ. ಯಾರಾದರು ಸಾರ್ ಎಂದು ಕರೆಯುತ್ತಾರೆ ಎಂದರೆ ಅದು ಆ ವ್ಯಕ್ತಿಯ ಸ್ಥಾನಮಾನ ಮತ್ತು ವಯಸ್ಸಿನ ಮೇಲೆ ಆಧಾರಿತವಾಗಿರುತ್ತದೆ. ಆದರೆ  ಈಗ ಅಂತಹ ಯಾವುದೇ ರೀತಿಯ ಅಂಶಗಳು ಇಲ್ಲ, ನನಗೆ ಈಗ ಯಾವುದೇ ಉನ್ನತ ಸ್ಥಾನಮಾನವಾಗಿರಲಿ ಅಥವಾ ನಿಮಗಿಂತ ವಯಸ್ಸಾಗಿದೆ ಎನ್ನುವುದಾಗಲಿ ಇಲ್ಲ ಆದ ಕಾರಣ ನೀವು ತರುಣ್ ಅಂತ ಕರೆದರೆ ಸಾಕು ಎಂದು ಮುಗುಮ್ಮಾಗಿ ಹೇಳಿದರು. ಗೊತ್ತಾಯ್ತಾ, ಇಂತಿ ನಿನ್ನ ಪ್ರೀತಿಯ ಸೋನು ? 

Share this Story:

Follow Webdunia kannada