ಆರ್‌ ಅಶೋಕ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್

Sampriya
ಬುಧವಾರ, 1 ಜನವರಿ 2025 (18:39 IST)
Photo Courtesy X
ಬೆಂಗಳೂರು: ಫೆ.16ಕ್ಕೆ ಗೆಳತಿ ಡಾ.ಧನ್ಯತಾ ಅವರನ್ನು ಕೈ ಹಿಡಿಯಲಿರುವ ನಟ ಡಾಲಿ ಧನಂಜಯ್ ಅವರು ಇದೀಗ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌,  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಧನಂಜಯ್ ಅವರು ಮದುವೆಗೆ ಆಹ್ವಾನಿಸಿದ್ದಾರೆ.

ಇಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರನ್ನು ಭೇಟಿಯಾಗಿ ಮದುವೆಗೆ ಡಾಲಿ ಧನಂಜಯ್ ಆಹ್ವಾನಿಸಿದ್ದಾರೆ.

ಈ ಫೋಟೋಗಳನ್ನು ಆರ್‌ ಅಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.  

ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ ಧನಂಜಯ್ ಅವರು ಇಂದು ತಮ್ಮ ವಿವಾಹ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಅವರಿಗೆ ಶುಭ ಹಾರೈಸಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ ಪ್ರಕರಣ: ಸಂತ್ರಸ್ತ ಕುಟುಂಬದ ಜತೆ ಮಾತನಾಡಿದ ವಿಜಯ್ ದಳಪತಿ

ಭಾರೀ ಮೆಚ್ಚುಗೆಯ ನಡುವೆ ರಿಷಬ್ ಶೆಟ್ಟಿಗೆ ಬಂತು ಬೆಂಗಳೂರು ತುಳುಕೂಟದಿಂದ ಪತ್ರ

ನಟಿಗೆ ಲೈಂಗಿಕ ಕಿರುಕುಳ, ವಂಚನೆ ಪ್ರಕರಣ: ನಿರ್ದೇಶಕ ಹೇಮಂತ್ ಕುಮಾರ್ ಅರೆಸ್ಟ್‌

ಕಾಂತಾರ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಕಾಶ್ ರಾಜ್‌ರಿಂದ ಬಂದು ಮೆಸೇಜ್‌

ನಟನೆಗೆ ಬ್ರೇಕ್ ನೀಡಿ ಸ್ನೇಹಿತರ ಜತೆ ಆಧ್ಯಾತ್ಮಿಕ ಪಯಣ ಬೆಳೆಸಿದ ರಜನಿಕಾಂತ್‌

ಮುಂದಿನ ಸುದ್ದಿ
Show comments