Select Your Language

Notifications

webdunia
webdunia
webdunia
webdunia

ದೊಡ್ಡಮನೆಗೆ ಹುಡುಗನಿಗೆ ಅಂತೂ ಹುಡುಗಿ ಸಿಕ್ಲು

ದೊಡ್ಡಮನೆಗೆ ಹುಡುಗನಿಗೆ ಅಂತೂ ಹುಡುಗಿ ಸಿಕ್ಲು
, ಮಂಗಳವಾರ, 27 ಜನವರಿ 2015 (10:57 IST)
ಅನೇಕ ಚಿತ್ರಗಳ ಬಗ್ಗೆ ಸದಾ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಆದರೆ ಆ ಬಗ್ಗೆ ಬರೀ ಸುದ್ದಿ ಮಾತ್ರ ಕೇಳ್ತಾ ಇರುತ್ತದೆಯೇ ವಿನಃ ಅದರ ಬಗ್ಗೆ ಸ್ಪಷ್ಟವಾದ ಯಾವುದೇ ರೀತಿಯ ಚಿತ್ರಣ ದೊರಕಿರುವುದಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡುಗ ಚಿತ್ರಕ್ಕೆ ಸಂಬಂಧಿಸಿದಂತೆ ಹಾಗೆ ಆಗಿದೆ  . ಪುನೀತ್ ರಾಜ್ ಕುಮಾರ್ ಜೊತೆ ರಚಿತ, ರಮ್ಯ,ಅವರು, ಇವರು ಇನ್ನು ಯಾರು ನಟಿಸ್ತಾರೋ ಅನ್ನುವ ಸುದ್ದಿ ನಾವು ಬರೆದಿದ್ದೆವು, ಆದರೆ ಈಗ ಆ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅಂದರೆ ಈಗ ಸೂರಿ ನಿರ್ದೇಶನದ ಚಿತ್ರ ದೊಡ್ಮನೆ ಹುಡುಗನಿಗೆ ಹುಡುಗಿ ಸಿಕ್ಕಿದ್ದಾಳೆ, ಆಕೆಗೆ ಮಿಸೆಸ್ ರಾಮಾಚಾರಿ ಅಲಿಯಾಸ್ ರಾಧಿಕ ಪಂಡಿತ್. ಕನ್ನಡದ ಯಶಸ್ವಿ ನಟಿಯಾಗಿರುವ ರಾಧಿಕ ಪಂಡಿತ್ ಈಗ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡುಗ ಚಿತ್ರದಲ್ಲಿ ಆಯ್ಕೆಯಾಗಿದ್ದಾಳೆ. 
ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಪ್ರಯತ್ನಗಳನ್ನು ಮಾಡಿ ಅಂತಿಮವಾಗಿ ತಮ್ಮ  ಕಡ್ಡಿ ಪುಡಿ ಚಿತ್ರದ ಹುಡುಗಿಯನ್ನು  ಆಯ್ಕೆ ಮಾಡಿದ್ದಾರೆ ನಿರ್ದೇಶಕ ಸೂರಿ. ದೊಡ್ಮನೆ  ಹುಡುಗ ಚಿತ್ರದಲ್ಲಿ  ಆರಂಭದಲ್ಲಿ ರಮ್ಯಳನ್ನು ಆಯ್ಕೆ ಮಾಡಲಾಗಿತ್ತು, ಆದರೆ ಸಂಭಾವನೆ ವಿಷಯವನ್ನು ಮುಂದಿಟ್ಟುಕೊಂಡು ರಮ್ಯ ಸ್ಯಾಂಡಲ್ ವುಡ್ ನ್ನು ಮಾತ್ರವಲ್ಲ ಭಾರತವನ್ನೇ ಬಿಟ್ಟು ಹೊರತು ಹೋದಳು. ಆ ಜಾಗಕ್ಕೆ ರಚಿತ ರಾಮ್ ಬಂದಳಾದರು, ಆಕೆ ಸಹಿತ  ನಟಿಸುವ ಆಸೆ ತೋರಿಸಲಿಲ್ಲ. ಹೀಗೆ ನೆನಗುದಿಯಲ್ಲಿ  ಇದ್ದ ದೊಡ್ಮನೆ ಹುಡುಗನಿಗೆ ರಾಧಿಕ ಪಂಡಿತ್ ಜೀವ ತರುತ್ತಿದ್ದಾಳೆ. ಈ ಮೊದಲೇ ಸಹ ರಾಧಿಕ ಪುನೀತ್ ಜೊತೆ ನಟಿಸಿದ್ದಳು. ಈಗ ಮತ್ತೊಮ್ಮೆ ಒಳ್ಳೆಯ ಪ್ರಾಜಕ್ಟ್ ನಲ್ಲಿ ನಟಿಸುವ ಅವಕಾಶ ಪಡೆದು ಕೊಂಡಿದ್ದಾಳೆ. 
 

Share this Story:

Follow Webdunia kannada