Select Your Language

Notifications

webdunia
webdunia
webdunia
webdunia

ವಿವಾದಿತ ನಿರ್ದೇಶಕ ರಾಮ ಗೋಪಾಲ್ ವರ್ಮ ನಟನೆಯತ್ತ..

ವಿವಾದಿತ ನಿರ್ದೇಶಕ  ರಾಮ ಗೋಪಾಲ್ ವರ್ಮ ನಟನೆಯತ್ತ..
mumbai , ಸೋಮವಾರ, 1 ಡಿಸೆಂಬರ್ 2014 (13:54 IST)
ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮ  ನಿರ್ದೇಶನ ಮಾಡಿದ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಲ್ಲದೆ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿ ಟಾಪ್ ನಿರ್ದೇಶಕ  ಎನ್ನುವ ಅಗ್ಗಳಿಕೆ ಪಡೆದಿದ್ದರು. ಆದರೆ ಇದೆಲ್ಲ ಹಳೆಯ ಕಥೆ. ಯಾಕೆಂದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ತಮ್ಮ ಅದೇ ಜನಪ್ರಿಯತೆಯನ್ನು ಪಡೆದುಕೊಳ್ಳಲು-ಉಳಿಸಿ ಕೊಳ್ಳಲು ಸಾಧ್ಯವಾಗಲೇ ಇಲ್ಲ. 
 
ಅವರು ತಮ್ಮ ಚಿತ್ರರಂಗದಲ್ಲಿ ಆರಂಭದಿಂದಲೂ ಒಂದೇ ತೆರನಾದ  ಗೌರವಯುತ ಕೆಲಸ ಮಾಡಿದ್ದಿದ್ದರೆ,ಅವರನ್ನು ಇಡಿ ಭಾರತೀಯ ಚಿತ್ರರಂಗ ಕಾಪಾಡುತ್ತಿತ್ತು.  ಆದರೆ ಆತ ಹಾಗೆ ಮಾಡಲಿಲ್ಲ.ಕನಿಷ್ಠ  ಸೋತು ಹೈರಾಣಾದರು ಸಹಿತ ಒಂದು ಬಗೆಯ ಘನತೆಯನ್ನು ಹೊಂದಿದ್ದರೆ ಖಂಡಿತ ಅವರ ಬಗ್ಗೆ ಗೌರವ ಉಳಿದಿರುತ್ತಿತ್ತು. ಆದರೆ ಹಾಗಾಗಲಿಲ್ಲ 
 
ಇತ್ತೀಚಿನ ದಿನಗಳಲ್ಲಿ ಆತನ ನಿರ್ದೇಶನದ ಚಿತ್ರಗಳು ಸೋತು ಮಕಾಡೆ ಮಲಗಿದೆ. ಆದರೆ ಈಗ ಬಂದಿರುವ ಸುದ್ದಿ ಏನೆಂದರೆ ವರ್ಮ ನಿರ್ದೇಶನ ಬಿಟ್ಟು ನಟನೆ ಕಡೆಗೆ ತಮ್ಮ ಗಮನ ನೆಟ್ಟಿದ್ದಾರೆ. ಅಂದರೆ ಅವರು ಈಗ ನಟಿಸಲು ಸಿದ್ಧ ಆಗಿದ್ದಾರೆ. ಈ ಸಂಗತಿ ಎಲ್ಲರಲ್ಲೂ ಸಂಚಲನ ಉಂಟು ಮಾಡಿದೆ ಎಂದೇ ಹೇಳ ಬಹುದಾಗಿದೆ. 
 
ಸದಾ ತನ್ನ ವಿವಾದಿತ ಹೇಳಿಕೆಗಳನ್ನು  ನೀಡುತ್ತಿದ್ದ ರಾಮ್ ಗೋಪಾಲ್ ವರ್ಮ ಈಗ ಸ್ಪಾಟ್ ಚಿತ್ರದಲ್ಲಿ ನಟನೆಯತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ನೋಡುವ ರಾಮ್ ಗೋಪಾಲ್ ವರ್ಮ ಎಷ್ಟರ ಮಟ್ಟಿಗೆ ತಮ್ಮ ಗಮನವನ್ನು ಸೆಳೆಯುತ್ತಾರೋ!
 

Share this Story:

Follow Webdunia kannada