Select Your Language

Notifications

webdunia
webdunia
webdunia
webdunia

ರಜನಿ ಫೈಟ್ ಬಗ್ಗೆ ನಿರ್ದೇಶಕ ರವಿ ಸಂಚಲನ ಪ್ರತಿಕ್ರಿಯೆ

ರಜನಿ ಫೈಟ್ ಬಗ್ಗೆ ನಿರ್ದೇಶಕ ರವಿ ಸಂಚಲನ ಪ್ರತಿಕ್ರಿಯೆ
, ಶನಿವಾರ, 20 ಡಿಸೆಂಬರ್ 2014 (15:12 IST)
ಲಿಂಗಾ ಚಿತ್ರವನ್ನು ಕೆ ಎಸ್ ರವಿಕುಮಾರ್ ಅವರು ನಿರ್ದೇಶನ ಮಾಡಿದ್ದಬಗ್ಗೆ ನಿಮಗೆ ಗೊತ್ತೇ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಟಾಲಿವುಡ್ ನಟ ಜಗಪತಿ ಬಾಬು ಅವರು ನಟಿಸಿದ್ದ   ಈ ಚಿತ್ರ ಗಳಿಕೆಯಲ್ಲಿ ಮುಂದೆ ಇದೆ ಎನ್ನುವ ಸಂಗತಿಯನ್ನು ನಾವು ಈ ಮೊದಲು ತಿಳಿಸಿದ್ದೆವು. 
ಈ ಚಿತ್ರದಲ್ಲಿ ಜಗಪತಿ ಬಾಬು ವಿಲನ್ ಪಾತ್ರಧಾರಿ ಆಗಿದ್ದಾರೆ. ಜಗಪತಿ ಬಾಬು ಅವರ ನಟನೆ  ಹಾಗೂ ರಜನಿ ಫೈಟ್  ಬಗ್ಗೆ ಅನೇಕ ವಿಮರ್ಶೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಕೆ. ಎಸ್ ರವಿಕುಮಾರ್ ಹಾಲಿವುಡ್ ನಲ್ಲಿ 1500  ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ಬ್ಯಾಟ್ ಮ್ಯಾನ್   ನೋಡಿ ಆನಂದಿಸುವ ವೀಕ್ಷಕರು ರಜನಿಕಾಂತ್ ಅವರು ಬೆಲೂನ್ ಮೇಲೆ ಜಿಗಿದು ಫೈಟ್ ಮಾಡಿದ್ದಾರೆ ಎಂದು ವಿಮರ್ಶಿಸುವುದು ಎಷ್ಟು ಸರಿ ಎಂದು   ಪ್ರಶ್ನಿಸಿದ್ದಾರೆ. 
 
ಸಾಮಾನ್ಯವಾಗಿ ಇಂಗ್ಲೀಶ್ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಗಳ ಸಾಹಸ ದೃಶ್ಯ ಕಂಡು ಖುಷಿ ಪಡುವ ಮಂದಿ ಈಗ ರಜನಿ ಸಾಹಸದ ಬಗ್ಗೆ ನೀಡಿರುವ ಪ್ರತಿಕ್ರಿಯೆ ಕಂಡಾಗ ನನಗೆ ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದಾರೋ ಇಲ್ಲವೋ ಎನ್ನುವ ಸಂದೇಶ ಮೂಡಿದೆ ಎಂದು ವಿಮರ್ಶಕರಿಗೆ ಮಾತಿನ ಉತ್ತರ ನೀಡಿದ್ದಾರೆ ಕೆ ಎಸ್ ರವಿಕುಮಾರ್. 

Share this Story:

Follow Webdunia kannada