Select Your Language

Notifications

webdunia
webdunia
webdunia
webdunia

ವದಂತಿಗಳಿಗೆ ಕಿವಿಕೊಡಬೇಡಿ ದಿಲೀಪ್ ಕುಮಾರ್ ಹುಷಾರಾಗಿದ್ದಾರೆ -ಅಮಿತಾಬ್ ಬಚ್ಚನ್

ವದಂತಿಗಳಿಗೆ ಕಿವಿಕೊಡಬೇಡಿ ದಿಲೀಪ್ ಕುಮಾರ್ ಹುಷಾರಾಗಿದ್ದಾರೆ -ಅಮಿತಾಬ್ ಬಚ್ಚನ್
mumbai , ಬುಧವಾರ, 26 ನವೆಂಬರ್ 2014 (12:49 IST)
ಸಾಮಾನ್ಯವಾಗಿ ವಯಸ್ಸಾದ ಸೂಪರ್ ಹೀರೋಗಳ ಆರೋಗ್ಯದ  ಬಗ್ಗೆ ಏನಾದರೊಂದು ಸುದ್ದಿ ಹರಡುತ್ತಲೇ ಇರುತ್ತದೆ. ಇದಕ್ಕೆ ದಿಲೀಪ್ ಕುಮಾರ್ ಅವರು ಹೊರತಲ್ಲ. 91  ರ ಹರೆಯದ 50ರ ದಶಕದ ಬಾಲಿವುಡ್ ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ ಎನ್ನುವ ಸಂಗತಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ದಿಲೀಪ್ ಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ. ಸುಖಾಸುಮ್ಮನೆ ಏನೆಂದರೆ ಅದನ್ನು ಹರಡದಿರಿ ಎಂದು ಬೇಸರ ಹಾಗು ಸಿಟ್ಟಿನಿಂದ ವದಂತಿ ಹರಡುವವರ ಬಗ್ಗೆ ಹರಿಹಾಯ್ದಿದ್ದಾರೆ.  
 
ಯೂಸುಬ್ ಸಾಬ್ ಬಗ್ಗೆ ಹರಡಿರುವ ವದಂತಿ ಆಧಾರರಹಿತ ಎನ್ನುವುದನ್ನು ಬಿಗ್ ಬಿ ಟ್ವೀಟಿಸಿ  ಜಗತ್ತಿಗೆ ತಿಳಿಸಿದ್ದಾರೆ. ದಿಲೀಪ್ ಕುಮಾರ್ ಅವರು ತಮ್ಮ ಪತ್ನಿ ಜೊತೆ ಇತ್ತೀಚೆಗೆ ಮುಂಬೈ ನಲ್ಲಿ ನಡೆದ  ಸಲ್ಮಾನ್ ಖಾನ್ ಸಹೋದರಿ ಅರ್ಪಿತ ಖಾನ್ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಆದ್ದರಿಂದ ನಾವು ಈ ಸುದ್ದಿ ಬರೆಯುವ ಆರಂಭದಲ್ಲಿ ವಯಸ್ಸಾದ ಸೂಪರ್ ಸ್ಟಾರ್ಗಳ ಆರೋಗ್ಯದ ಬಗ್ಗೆ ಏನಾದರೊಂದು ಸುದ್ದಿ ಹರಡುತ್ತಲೇ ಇರುತ್ತವೆ ಎಂದು ತಿಳಿಸಿದ್ದು.  

Share this Story:

Follow Webdunia kannada