Select Your Language

Notifications

webdunia
webdunia
webdunia
webdunia

ಭಟ್ಟರ ಮುಂದಿನ ಚಿತ್ರದಲ್ಲಿ ಚಾನ್ಸ್ ಪಡೆದ ದಿಗಂತ್-ದುನಿಯಾ ವಿಜಯ್‌

ಭಟ್ಟರ ಮುಂದಿನ ಚಿತ್ರದಲ್ಲಿ ಚಾನ್ಸ್ ಪಡೆದ ದಿಗಂತ್-ದುನಿಯಾ ವಿಜಯ್‌
, ಗುರುವಾರ, 23 ಏಪ್ರಿಲ್ 2015 (12:27 IST)
ಎಲ್ಲವೂ ಎಣಿಸಿದಂತೆ ನಡೆದಿದ್ದಿದ್ದರೆ ಯೋಗರಾಜ್ ಭಟ್ ಅವರ ನಿರ್ದೇಶನದ ವಾಸ್ತು ಪ್ರಕಾರ ಬಿಡುಗಡೆಯ ಬಳಿಕ ಗಣೇಶ್ ಅವರ ನಟನೆಯ ಚಿತ್ರ ಸೆಟ್ಟೇರಬೇಕಿತ್ತು. ಆದರೆ ಅದ್ಯಾಕೋ ಈ ಜೋಡಿ ಮತ್ತೆ ಒಂದಾಗಲು  ತಡವಾಗುತ್ತಿದೆ . ಕಾರಣಗಳು ಏನೇ ಇರಲಿ ಈ ತಂಡ ಒಟ್ಟಿಗೆ  ಕೆಲಸ ಮಾಡುವ  ಕಾಲ ಸನ್ನಿಹಿತವಾಗಿಲ್ಲ. ಆದ ಕಾರಣ ಭಟ್ಟರು ಈಗ ಆ ಚಿತ್ರವನ್ನು ಪಕ್ಕಕ್ಕೆ ಇಟ್ಟು ಹೊಸ ಚಿತ್ರ ಕಥೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

ಇನ್ನು ಹೆಸರಿಡದ ಆ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ದಿಗಂತ್ ನಟಿಸುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಈ ತಾರಜೋಡಿ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ದಿಗಂತ್ ಯೋಗರಾಜ್ ಭಟ್ ಅವರ ನಿರ್ದೇಶನದ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ವಿಜಯ್ ಈವರೆಗೂ ಭಟ್ಟರ ನಿರ್ದೇಶನದ ಯಾವುದೇ ಚಿತ್ರದಲ್ಲೂ ಸಹಿತ ನಟಿಸಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ. ಈ ಚಿತ್ರವನ್ನು ಬಿ ಸುರೇಶ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ಮೇ ತಿಂಗಳಲ್ಲಿ ಲಾಂಚ್ ಆಗುತ್ತಿದೆ .

Share this Story:

Follow Webdunia kannada