Select Your Language

Notifications

webdunia
webdunia
webdunia
webdunia

ಸರ್ವಾಂತರಯಾಮಿ ದರ್ಶನ್ ಕಾಲ್ಶೀಟ್ ಬೇಕಾ, ಹಾಗಾದ್ರೆ 2016ರ ತನಕ ಕಾಯಲೇ ಬೇಕು !

ಸರ್ವಾಂತರಯಾಮಿ ದರ್ಶನ್ ಕಾಲ್ಶೀಟ್ ಬೇಕಾ, ಹಾಗಾದ್ರೆ 2016ರ ತನಕ ಕಾಯಲೇ ಬೇಕು !
, ಶನಿವಾರ, 1 ನವೆಂಬರ್ 2014 (09:39 IST)
ಚಾಲೆಂಜಿಂಗ್‌ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್ ನ ಬ್ಯುಸಿಯೇಸ್ಟ್ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಚಿತ್ರ ಮಾಡಲು ನಿರ್ಮಾಪಕರು ತಮ್ಮ ಬ್ಯಾಗ್ ಹಿಡಿದು ದರ್ಶನ್ ಮನೆ ಬಾಗಿಲ ಬಳಿ ಕಾಯುತ್ತಿದ್ದಾರೆ ಆ ಬಗ್ಗೆಯೂ ಸುಳ್ಳಲ್ಲ. 

ಆದರೆ ಅವರ ಸಮಯ ಮಾತ್ರ ಸದ್ಯಕ್ಕೆ ಸಿಗುವ ಸಾಧ್ಯತೆ ಇಲ್ಲ. ಅದಕ್ಕೆ ಕಾರಣ ಚಿತ್ರ ನಿರ್ಮಾಪಕರು ಈಗ ನಿರಾಸೆ ಹೊಂದುವ ಪರಿಸ್ಥಿತಿ ಇದೆ. ಮುಖ್ಯವಾಗಿ ಹಾಗೆ ಆಗಲು ಕಾರಣ ಏನೆಂದರೆ ಪ್ರಸ್ತುತ ದರ್ಶನ್ ಕೈಲಿ ಏಳು ಚಿತ್ರಗಳಿವೆ. ಮೆಜೆಸ್ಟಿಕ್ ಚಿತ್ರದ ಹೀರೋ ಗೆಲುವಿನ ಕುದುರೆ ಆದ ಬಳಿಕ ಈಗ  ಬುಲ್ ಬುಲ್ ಸೇರಿದಂತೆ 50 ಕ್ಕೂ ಅಧಿಕ   ಚಿತ್ರಗಳಲ್ಲಿ ನಟಿಸಿದ್ದಾರೆ. 
 
ಈಗ ಅವರೆಷ್ಟು ಬ್ಯುಸಿ ಅಂದರೆ  ದರ್ಶನ್ ಕಾಲ್‌ಶೀಟ್ ಸಿಗಬೇಕಾದರೆ ಕನಿಷ್ಠ ಇನ್ನು ಎರಡು ವರ್ಷಗಳಾದರೂ ಕಾಯಲೇ ಬೇಕು. 2016ರ ತನಕ ದರ್ಶನ್ ಅವರ ಬಳಿ ಹೊಸ ಚಿತ್ರಗಳನ್ನು ಒಪ್ಪಲು ಸಮಯ ಇಲ್ಲ. ದರ್ಶನ್ ಈಗ ಸರ್ವಾಂತರಯಾಮಿ, ಅಂಬರೀಶ, ಐರಾವತ, ಜಗ್ಗು ದಾದ ಮುಂತಾದ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸುದ್ದಿ ಅನೇಕ ನಿರ್ಮಾಪಕರ ಕನಸಿಗೆ  ತಣ್ಣೀರು ಎರಚಿದೆ.  

Share this Story:

Follow Webdunia kannada