Select Your Language

Notifications

webdunia
webdunia
webdunia
webdunia

ಚುಂಬನದ ಹೊಸ ಅಧ್ಯಾಯ ತೆರೆದ ಧನುಷ್-ಅಕ್ಷರಾ

ಚುಂಬನದ ಹೊಸ ಅಧ್ಯಾಯ ತೆರೆದ ಧನುಷ್-ಅಕ್ಷರಾ
, ಶುಕ್ರವಾರ, 23 ಜನವರಿ 2015 (09:24 IST)
ಈ ವರೆಗೂ ಸಿನಿಮಾಗಳಲ್ಲಿ ಅಧರ ಹಾಗೂ ಕೆನ್ನೆ ಗಳಿಗೆ ಮುತ್ತು ನೀಡುವ ದೃಶ್ಯಗಳು ಸಾಮಾನ್ಯವಾಗಿತ್ತು. ಆದರೆ ಈಗ   ಕಾಲಿವುಡ್ ಹೀರೋ ಧನುಷ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ತಮ್ಮ ಮುಂದಿನ ಚಿತ್ರ ಶಮಿತಾಬ್‌ನಲ್ಲಿ. ಚುಂಬನ ದೃಶ್ಯಗಳ ಹೊಸ ಅಧ್ಯಾಯವನ್ನೇ ತೆರೆದಿದ್ದಾರೆ.ಅಮಿತಾಬ್ ಬಚ್ಚನ್ ಅವರ ಜೊತೆ ಅಭಿನಯಿಸುವ ಶಮಿತಾಬ್ ನಲ್ಲಿ ಹೊಸದಾಗಿ ಚುಂಬನ ಲೋಕವನ್ನು ತೆರೆದಿದ್ದಾರೆ ಧನುಷ್.    

ಈ ಚಿತ್ರದಲ್ಲಿ ಕಮಲ್ ಹಾಸನ್ ಅವರ ಎರಡನೇ ಮಗಳು ಅಕ್ಷರ ಹೀರೋಯಿನ್ ಆಗಿದ್ದಾಳೆ. ಇದು ಆಕೆಯ ಅಭಿನಯದ ಚೊಚ್ಚಲ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಆಕೆ ತುಂಬಾ ಗ್ಲಾಮರ್ ಆಗಿ ಕಂಡಿರುವುದಲ್ಲದೆ ಅತ್ಯಂತ ರೊಮ್ಯಾಂಟಿಕ್ ಆಗಿಯೂ ಸಹಿತ ಅಭಿನಯಿಸಿದ್ದಾಳಂತೆ. ಅಂದರೆ ತನ್ನ ಅಕ್ಕ ಶ್ರುತಿಯನ್ನು ಮೀರಿದ್ದಾಳೆ ಈ ರೀತಿಯ ನಟನೆಯಲ್ಲಿ ಎನ್ನುವುದು ಸದ್ಯದ ಸಂಗತಿಯಾಗಿದೆ. ಆ ಚಿತ್ರದ ಟ್ರೇಲರ್ ನಲ್ಲಿ ಧನುಷ್ ಹಾಗು ಅಕ್ಷರ ಚುಂಬನ ದೃಶ್ಯಗಳು  ಕಾಲಿವುಡ್ ಮಂದಿಯಲ್ಲಿ ರೋಮಾಂಚನ ಉಂಟು ಮಾಡಿದೆಯಂತೆ.

ಈ ಚಿತ್ರದ ಟ್ರೇಲರ್ ನಲ್ಲಿ ಹೀರೋಯಿನ್ ಅಕ್ಷರ ಹಾಸನ್ ಧನುಷ್ ಕಡೆ ನೋಡುತ್ತಾ ಕಿಸ್ ಮೈ ಆಸ್ ಮಂಕಿ ಎಂದು ಹೇಳಿದಾಗ ಆತ ಆಕೆಯ ಅಂಡಿನ ಮೇಲೆ ಮುತ್ತಿಡುತ್ತಾರೆ.ಈ ಟೀಜರ್ ಕೇವಲ ನೋಡಿದ್ದಲ್ಲದೆ ಆ ಲಿಂಕನ್ನು ಶೇರ್ ಸಹಿತ ಮಾಡಿಕೊಳ್ಳುತ್ತಿದ್ದಾರಂತೆ. ಈ ಚಿತ್ರ ಹಿಟ್ ಆಗೋದು ಗ್ಯಾರೆಂಟಿ ಎಂದು ಹೇಳುತ್ತಿದ್ದಾರೆ. ಈ ಹಾಡು ಈಗ ಸಿಕ್ಕಾಪಟ್ಟೆ ಯಶಸ್ವಿಯಾಗಿದೆ.ಧನುಷ್ ಅಭಿನಯದ ರಂಜಾನ ದಂತೆ ಈಗ ಶಮಿತಾಬ್ ಸಹಿತ ಗೆಲ್ಲುವ ಸಾಧ್ಯತೆಯನ್ನು ಸ್ಪಷ್ಟ ಪಡಿಸಿದೆ.

Share this Story:

Follow Webdunia kannada