Select Your Language

Notifications

webdunia
webdunia
webdunia
webdunia

ಎಂದಿರನ್-2 ಗೆ ದೀಪಿಕಾ ನಾಯಕಿ ?!

ಎಂದಿರನ್-2 ಗೆ ದೀಪಿಕಾ ನಾಯಕಿ ?!
, ಶುಕ್ರವಾರ, 4 ಸೆಪ್ಟಂಬರ್ 2015 (09:38 IST)
ದೀಪಿಕಾ ಪಡುಕೋಣೆ ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ಹೀರೋಯಿನ್ ಗಳ ಲೀಸ್ಟ್ ನಲ್ಲಿದ್ದಾರೆ. ಇಗಾಗ್ಲೇ ಸಾಕಷ್ಟು ಹಿಟ್ ಮೂವಿಗಳನ್ನ ಕೊಟ್ಟ ದೀಪಿಕಾ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿರೋ ನಟಿ. 'ಕೊಚ್ಚಾಡಿಯನ್' ಚಿತ್ರದ ಮೂಲಕ ಕಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆಗೆ ಮತ್ತೊಂದು ಆಫರ್ ಬಂದಿದೆ. ಆದ್ರೀಗ ಇವರಿಗೆ ಆಫರ್ ಬಂದಿರೋದು ತಮಿಳು ಸಿನಿ ಅಂಗಳದಿಂದ. ದೀಪಿಕಾ ಇದೀಗ  ಸೂಪರ್ ಸ್ಟಾರ್ ರಜಿನಿಕಾಂತ್ ನಟಿಸ್ತಿರೋ ರೋಬೋಟ್ – 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಎಸ್ ಅಂದಿದ್ದಾರಂತೆ.
ಎಂದಿರನ್ ಚಿತ್ರದಲ್ಲಿ ರಜನಿಕಾಂತ್ ಜೊತೆ ಐಶ್ವರ್ಯ ರೈ ಬಚ್ಚನ್ ಕಾಣಿಸಿಕೊಂಡಿದ್ದರು. ಶಂಕರ್ ನಿರ್ದೇಶಿಸಲಿರುವ ಈ ಚಿತ್ರದ ಮುಂದುವರಿದ ಭಾಗ ರೋಬೋಟ್ - 2 ಚಿತ್ರದಲ್ಲಿ ರಜಿನಿಕಾಂತ್ ಜೊತೆ ಸ್ಕ್ರೀನ್ ಶೇರ್ ಮಾಡೋ ಭಾಗ್ಯ ದೀಪಿಕಾಗೆ ಒಲಿದು ಬಂದಿದೆ ಎನ್ನಲಾಗ್ತಿದೆ. ಆದ್ರೆ ಸೂಪರ್ ಸ್ಟಾರ್ ಜೊತೆ ಅಭಿನಯಿಸೋ ಆಫರ್ ಗೆ ಪಡುಕೋಣೆ ಒಪ್ಪಿಕೊಂಡಿದ್ದಾರಾ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
 
ಒಂದು ವೇಳೆ ದೀಪಿಕಾ ಸೂಪರ್ ಸ್ಟಾರ್ ಜೊತೆಗೆ ನಟಿಸೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆ ಅಭಿಮಾನಿಗಳಿಗೆ ರಸದೂಟ ಸಿಗಲಿದೆ. ಅಲ್ಲದೆ ಅಭಿಮಾನಿಗಳು ಸಹ ಈ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸುವಂತಾಗಲಿ ಅಂತ ಪ್ರಾರ್ಥಿಸ್ತಿದ್ದಾರಂತೆ.

Share this Story:

Follow Webdunia kannada