ಬಂಧನ ಬೆನ್ನಲ್ಲೇ ನಟ ದರ್ಶನ್ ರನ್ನು ಸಿನಿಮಾದಿಂದಲೇ ಹೊರಹಾಕಿದ ಚಿತ್ರತಂಡ

Krishnaveni K
ಶನಿವಾರ, 6 ಜುಲೈ 2024 (16:49 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಚಿತ್ರತಂಡವೊಂದು ಅವರನ್ನು ಸಿನಿಮಾದಿಂದಲೇ ಕೈ ಬಿಟ್ಟಿದೆ.

ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಸಿನಿಮಾ ಕರಾವಳಿ. ಕಿಚ್ಚ ಸುದೀಪ್ ಆಪ್ತ ಗುರುದತ್ ಗಾಣಿಗ ಈ ಸಿನಿಮಾದ ನಿರ್ದೇಶಕ. ಈ ಸಿನಿಮಾದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಪ್ರಜ್ವಲ್ ಗೆ ದರ್ಶನ್ ಆಪ್ತರಾಗಿದ್ದರು. ಹೀಗಾಗಿ ಈ ಸಿನಿಮಾದಲ್ಲಿ ಅದೇ ಆಪ್ತತೆಯಿಂದ ದರ್ಶನ್ ಪಾತ್ರ ಮಾಡುವುದು ಫಿಕ್ಸ್ ಆಗಿತ್ತು.

ಆದರೆ ಇದೀಗ ಚಿತ್ರೀಕರಣ ಹಂತದಲ್ಲಿರುವ ಕರಾವಳಿ ಚಿತ್ರತಂಡ ದರ್ಶನ್ ರನ್ನು ಸಿನಿಮಾದಿಂದಲೇ ಹೊರಹಾಕಿದೆ. ಇನ್ನೇನು ಶೂಟಿಂಗ್ ಆರಂಭವಾಗಬೇಕೆನ್ನುವಾಗ ದರ್ಶನ್ ಜೈಲು ಪಾಲಾಗಿದ್ದು, ಯಾವಾಗ ಬಿಡುಗಡೆಯಾಗಬಹುದು ಎಂಬುದಕ್ಕೆ ಖಾತ್ರಿಯಿಲ್ಲ. ಹೀಗಾಗಿ ಅವರನ್ನೇ ಚಿತ್ರತಂಡದಿಂದ ಕೈ ಬಿಡಲಾಗಿದೆ.

ಇದೊಂದು ಪವರ್ ಫುಲ್ ಪಾತ್ರವಾಗಿದ್ದು, ಆ ಪಾತ್ರಕ್ಕೆ ಅಂತಹ ನಟರೇ ಬೇಕು. ಇದೀಗ ದರ್ಶನ್ ಮಾಡಬೇಕಾಗಿದ್ದ ಪಾತ್ರವನ್ನು ಚಿತ್ರತಂಡ ಯಾರ ಕೈಯಲ್ಲಿ ಮಾಡಿಸಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments