Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ ಜೊತೆ ಅಭಿನಯಿಸುವ ಅವಕಾಶ ಪಡೆದ ದರ್ಶನ್ ಕುಮಾರ್

ಐಶ್ವರ್ಯಾ ರೈ ಜೊತೆ ಅಭಿನಯಿಸುವ ಅವಕಾಶ ಪಡೆದ ದರ್ಶನ್ ಕುಮಾರ್
, ಸೋಮವಾರ, 30 ನವೆಂಬರ್ 2015 (12:30 IST)
ಪ್ರಿಯಾಂಕ ಛೋಪ್ರಾ ಅಭಿನಯದ ಮೇರಿ ಕೋಮ್ ಸಿನಿಮಾದಲ್ಲಿ ಪ್ರಿಯಾಂಕ ಛೋಪ್ರಾ ಜೊತೆ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದ  ದರ್ಶನ್ ಕುಮಾರ್ ಅವರಿಗೆ ಈಗ ಮತ್ತೊಂದು ಭರ್ಜರಿ ಬಹುಮಾನ ಸಿಕ್ಕಿದೆ. ದರ್ಶನ್ ಕುಮಾರ್ ಅವರಿಗೆ ಈಗ ಐಶ್ವರ್ಯಾ ರೈ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ.
 
ಸರಬ್ಜಿತ್ ಸಿಂಗ್ ಅವರ ಜೀವನಕಥೆ ಆಧಾರಿತವಾದ ಸಿನಿಮಾದಲ್ಲಿ ದರ್ಶನ್ ಕುಮಾರ್ ಐಶ್ ಬೇಬಿ ಜೊತೆ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ದರ್ಶನ್ ಪಾಕಿಸ್ತಾನದ ವಕೀಲ ಖಲೀದ್ ಪರ್ವೀದ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.ಖಲೀದ್, ಸರಬ್ಜಿತ್ ಅವರನ್ನು ಜೈಲಿನಿಂದ  ಬಿಡುಗಡೆ ಮಾಡಲು ಅವರ ಸಹೋದರಿ ನಡೆಸಿದ ಹೋರಾಟಕ್ಕೆ ಸಾಥ್ ನೀಡಿದ್ದರು.
 
ಇನ್ನು ಸಿನಿಮಾ ನಿರ್ದೇಶಕ ಓಮುಂಗ್ ಕುಮಾರ್ ಕೂಡ ಈ ಹಿಂದಿನ ಸಿನಿಮಾದಲ್ಲಿ ದರ್ಸನ್ ಕುಮಾರ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅದರಿಂದಾಗಿಯೇ ತಮ್ಮ ಸಿನಿಮಾಕ್ಕೆ ದರ್ಶನ್ ಅವರನ್ನು ತಮ್ಮ ಸಿನಿಮಾಕ್ಕೂ ಆಯ್ಕೆ ಮಾಡಿದ್ರಂತೆ ಓಮುಂಗ್ . ಸರಬ್ಜಿತ್ ಸಿನಿಮಾ 2016ರಲ್ಲಿ ತೆರೆಗೆ ಬರಲಿದೆಯಂತೆ.

Share this Story:

Follow Webdunia kannada